ಇಸ್ರೇಲ್-ಹಮಾಸ್ ಯುದ್ಧ: ವಿಶ್ವಸಂಸ್ಥೆಯ ಮತದಾನದಿಂದ ದೂರ ಸರಿದ ಭಾರತ

ನವದೆಹಲಿ: ಇಸ್ರೇಲ್ ಮತ್ತು ಪ್ಯಾಲೆಸ್ತೀನ್‌ನ ಉಗ್ರಗಾಮಿ ಸಂಘಟನೆಯಾದ ಹಮಾಸ್ ಮಧ್ಯೆ ನಡೆಯುತ್ತಿರುವ ಯುದ್ಧಕ್ಕೆ ಮಾನವೀಯ ನೆಲೆಯಲ್ಲಿ ತಕ್ಷಣ ವಿರಾಮ ಹಾಕುವಂತೆ ವಿಶ್ವಸಂಸ್ಥೆ ಕರೆ ನೀಡಿರುವ ನಿರ್ಣಯದ ಮೇಲಿನ ಮತದಾನದಿಂದ ಭಾರತ ಮತ  ದೂರ ಉಳಿದಿದೆ.

ಕದನ ವಿರಾಮ ಕರೆ ಮಸೂದೆ ಪರವಾಗಿ ೧೨೦ ದೇಶಗಳು ಮತ್ತು ಅದರ ವಿರುದ್ಧ ೧೪ ದೇಶಗಳು ಮತ ಚಲಾಯಿಸಿತು. ಭಾರತ, ಆಸ್ಟ್ರೇಲಿಯಾ, ಕೆನಡಾ, ಜರ್ಮನಿ, ಜಪಾನ್, ಉಕ್ರೈನ್, ಯುಕೆ ಮತದಾನದಿಂದ ದೂರ ಉಳಿದವು. ಹಮಾಸ್‌ನ ಭಯೋತ್ಪಾದಕ ದಾಳಿಗಳನ್ನು ಖಂಡಿಸುವ   ಪ್ಯಾರಾಗ್ರಾಫನ್ನು ಸೇರಿಸುವ ತಿದ್ದುಪಡಿಯನ್ನು ಕೆನಡಾ ನಂತರ ಪ್ರಸ್ತಾಪಿಸಿದ್ದು, ಆ ತಿದ್ದುಪಡಿ ಪರವಾಗಿ ಭಾರತ ಸಹಿತ ೮೭ ರಾಷ್ಟ್ರಗಳು ಮತ ಚಲಾಯಿಸಿದವು. ಆದರೆ ಅದು ಮೂರರಲ್ಲಿ ಎರಡರಷ್ಟು ಬಹುಮತ ಹೊಂದಿಲ್ಲದ ಕಾರಣ ಅದನ್ನು ಅಂಗೀಕರಿಸಲು ವಿಶ್ವಸಂಸ್ಥೆಗೆ ಸಾಧ್ಯವಾಗಲಿಲ್ಲ.

ಇನ್ನೊಂದೆಡೆ ಗಾಜಾದ ಮೇಲಿನ ಇಸ್ರೇಲ್ ಸೇನೆ ನೆಲ ಮತ್ತು ವಾಯುದಾಳಿಯನ್ನು ಇನ್ನಷ್ಟು ತೀವ್ರಗೊಳಿಸಿದೆ. ಇಂಟರ್‌ನೆಟ್, ಸಲ್ಯೂಲರ್ ಮತ್ತು ಲ್ಯಾಂಡ್ ಸೇವೆಗಳನ್ನು ಸ್ಥಗಿತಗಳಿಸಿದೆ. ಆ ಮೂಲಕ ಒಳಗಿನ ಮತ್ತು ಹೊರಗಿನ ಪ್ರಪಂಚದ ೨.೩ ಮಿಲಿಯನ್ ಜನರು ಇಂಟರ್‌ನೆಟ್  ಸೇವೆ ಕಡಿದುಕೊಂಡಿದ್ದಾರೆ. ಹಮಾಸ್‌ನ್ನು ಸಂಪೂರ್ಣ ನಿರ್ಮೂಲನೆ ಮಾಡುವ ತನಕ ತನ್ನ ದಾಳಿ ಮುಂದುವರಿಸಲಾಗುವುದೆಂದು ಇಸ್ರೇಲ್ ದೃಢ ಪ್ರತಿಜ್ಞೆ ಮಾಡಿದೆ. ಆದರೆ ಗಾಜಾದಲ್ಲಿ ಅದೆಷ್ಟು ಮಂದಿ ಸಾವನ್ನಪ್ಪಿದ್ದಾರೆ ಎಂಬ ಸ್ಪಷ್ಟ ಮಾಹಿತಿ ಈ ತನಕ ಲಭಿಸಿಲ್ಲ.  ಆದರೆ ಸಾವಿನ ಸಂಖ್ಯೆ ೭೩೦೦ ಮೀರಿದೆ ಎಂದೂ ಅದರಲ್ಲಿ ಶೇ.೬೦ಕ್ಕಿಂತ ಹೆಚ್ಚು ಅಪ್ರಾಪ್ತರು ಮತ್ತು ಮಹಿಳೆಯರು ಒಳಗೊಂಡಿದ್ದಾರೆ ಎಂದು ಲೆಕ್ಕ ಹಾಕಲಾಗಿದೆ. ೧೪ ದಶಲಕ್ಷಕ್ಕೂ ಹೆಚ್ಚು ಮಂದಿ ಈಗಾಗಲೇ ಸ್ಥಳಾಂತರಗೊಂಡಿದ್ದಾರೆ. ಇವರಲ್ಲಿ ಶೇ. ೫೦ರಷ್ಟು ಮಂದಿ ವಿಶ್ವ ಸಂಸ್ಥೆಯ ಆಶ್ರಮಗಳಲ್ಲಿ ಆಶ್ರಯ ಪಡೆದಿದ್ದಾರೆ. ಉಳಿದವರು ಹಮಾಸ್ ‘ಮಿತ್ರರು’ ಎಂದು ಪರಿಗಣಿಸಲಾಗಿದೆ.

Leave a Reply

Your email address will not be published. Required fields are marked *

You cannot copy content of this page