ಕುಂಬಳೆಯಲ್ಲಿ ಬಸ್ ತಡೆದು ಚಳವಳಿ : ಅಧಿಕಾರಿಗಳ ನಿರ್ಲಕ್ಷ್ಯ ವಿರುದ್ಧ ಪ್ರತಿಭಟನೆ
ಕುಂಬಳೆ: ಕುಂಬಳೆ- ಮುಳ್ಳೇರಿಯ ರಸ್ತೆಯನ್ನು ಆಧುನಿಕ ರೀತಿಯಲ್ಲಿ ಅಭಿವೃದ್ಧಿ ಪಡಿಸಿರುವಾಗ ಆ ಮೂಲಕ ಬಸ್ ಸಂಚಾರಕ್ಕೆ ಅಡ್ಡಿಯಾಗುವ ರೀತಿಯಲ್ಲಿ ಘಟನೆಗಳು ಸೃಷ್ಟಿಯಾ ಗುತ್ತಿದೆ. ಸಮಸ್ಯೆಗೆ ಪರಿಹಾರ ಕೈಗೊಳ್ಳ ಬೇಕಾದ ಅಧಿಕಾರಿಗಳು ಅಸಹಾಯ ಕರ ರೀತಿಯಲ್ಲಿ ನೋಡಿ ನಿಂತುಕೊಂಡಿ ದ್ದಾರೆಂಬ ಆರೋಪವುಂಟಾಗಿದೆ. ಇದೇ ವೇಳೆ ಸಮಸ್ಯೆಯನ್ನು ಬಿಗಡಾಯಿಸಲು ಪ್ರಯತ್ನ ನಡೆಯುತ್ತಿದೆ ಎಂಬ ಆರೋಪವೂ ಕೇಳಿ ಬಂದಿದೆ.
ಕುಂಬಳೆ-ಸೀತಾಂಗೋಳಿ ರೂಟ್ ನಲ್ಲಿ ಮಹಿಳಾ ಕಾಲೇಜೊಂದರ ಮುಂ ಭಾಗದಲ್ಲಿ ಬಸ್ ನಿಲ್ದಾಣ ಮಂಜೂರು ಮಾಡಬೇಕೆಂದು ಒತ್ತಾಯಿಸಿ ಇತ್ತೀಚೆಗೆ ವಿದ್ಯಾರ್ಥಿನಿಯರ ತಂಡವೊಂದು ಬಸ್‌ಗೆ ತಡೆಯೊಡ್ಡುವುದರೊಂದಿಗೆ ಸಮಸ್ಯೆ ಸೃಷ್ಟಿಯಾಗಿದೆ. ಇದೇ ಬೇಡಿಕೆಯನ್ನು ಮುಂದಿರಿಸಿಕೊಂಡು ಮರು ದಿನವೂ ವಿದ್ಯಾರ್ಥಿನಿಯರು ಬಸ್‌ಗಳಿಗೆ ತಡೆಯೊಡ್ಡಿ, ನೌಕರ ರೊಂದಿಗೆ ವಾಗ್ವಾದ ನಡೆಸಿರುವುದಾಗಿ ಆರೋಪಗಳಿವೆ. ಈ ಕುರಿತಾಗಿ ಬಸ್ ಮಾಲಕರು ಹಾಗೂ ನೌಕರರು ಕುಂಬಳೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಕಾಲೇಜಿನ ಆಚೆಗೂ, ಈಚೆ ಭಾಗದಲ್ಲೂ ರಸ್ತೆ ನಿರ್ಮಾಣವಾದಂದಿ ನಿಂದ ಸ್ಟಾಪ್ ಇದೆಯೆಂದೂ ಆ ಸ್ಟಾಪ್‌ನಿಂದ ವಿದ್ಯಾರ್ಥಿನಿಯರು ಬಸ್‌ಗೆ ಹತ್ತುವುದು ಹಾಗೂ ಇಳಿಯುತ್ತಿದ್ದರೆಂದೂ, ಅದರ ಹೆಸರಲ್ಲಿ ಇದುವರೆಗೆ ಯಾವುದೇ ಸಮಸ್ಯೆ ಉಂಟಾಗಿಲ್ಲವೆಂದು ದೂರಿನಲ್ಲಿ ತಿಳಿಸಲಾಗಿದೆ. ಮಾತ್ರವಲ್ಲ, ಮೂರು ನಿಮಿಷಕ್ಕೊಮ್ಮೆ ಬಸ್ ಸಂಚರಿಸುವ ಈ ರೂಟ್‌ನಲ್ಲಿ ಎಲ್ಲಾ ಸ್ಥಳದಲ್ಲೂ ಬಸ್ ನಿಲ್ಲಿಸಿ ಸಮಯಕ್ಕನುಸಾರವಾಗಿ ಸಂಚರಿಸಲು ಸಾಧ್ಯವಿಲ್ಲವೆಂದು ದೂರಿನಲ್ಲಿ ತಿಳಿಸಲಾಗಿದೆ. ಇದೆಲ್ಲದರ ಹೊರತಾಗಿ ಇಂತಹ ಸ್ಟಾಪ್‌ಗಾಗಿ ಈ ಹಿಂದೆ ಕೆಲವರು ಆರ್‌ಟಿಒರಲ್ಲಿ ಬೇಡಿಕೆಯೊಡ್ಡಿರುವುದಾಗಿಯೂ ಮೋಟಾರ್ ವಾಹನ ಇಲಾಖೆ ಅಧಿಕಾರಿಗಳು ದೂರಿನ ಕುರಿತು ನೇರವಾಗಿ ತನಿಖೆ ನಡೆಸಿ ಆರ್‌ಟಿಒಗೆ ವರದಿ ನೀಡಿದ್ದರು. ಅದರ ಆಧಾರದಲ್ಲಿ ಅರ್ಜಿಯನ್ನು ತಿರಸ್ಕರಿಸಲಾಗಿತ್ತೆಂದು ಪೊಲೀಸರಿಗೆ ತಿಳಿಸಲಾಗಿದೆ. ಸಮೀಪ ದಲ್ಲೇ ಇರುವ ಎರಡು ಸ್ಟಾಪ್‌ಗಳ ಮಧ್ಯೆ ಬೇರೊಂದು ಸ್ಟಾಪ್ ಮಂಜೂರು ಮಾಡಲಾಗದು ಎಂದು ತಿಳಿದು ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಪೊಲೀಸರು ದೂರ ಸ್ವೀಕರಿ ಸಿದ್ದರೂ ಬೇರೆ ಯಾವುದೇ ಕ್ರಮ ಕೈಗೊಳ್ಳದಿರುವುದು ಚಳವಳಿಗಾರರಿಗೆ ಸಹಾಯಕವಾಗಿದೆಯೆಂದು ಹೇಳಲಾಗುತ್ತಿದೆ.
ವಿದ್ಯಾರ್ಥಿಗಳಿಗಿಂತ ಇತರ ಪ್ರಯಾಣಿಕರು ಹೆಚ್ಚಿರುವ ರೂಟ್‌ನಲ್ಲಿ ಬಸ್ ಸಂಚಾರಕ್ಕೆ ಉಂಟಾಗುವ ಅಡಚಣೆ ಪ್ರಯಾಣಿಕರಿಗೆ ಸಮಸ್ಯೆ ಸಷ್ಟಿಯಾಗುತ್ತಿದೆಯೆಂದು ದೂರಲಾಗಿದೆ. ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಕಲ್ಲಿಕೋಟೆ ಡೆಪ್ಯುಟಿ ಟ್ರಾನ್ಸ್‌ಪೋರ್ಟ್ ಕಮಿಶನರ್, ರೀಜಿನಲ್ ಟ್ರಾನ್ಸ್‌ಪೋರ್ಟ್ ಆಫೀಸರ್ ಸೇರಿ ಕೈಗೊಂಡ ನಿರ್ಧಾರದ ವಿರುದ್ಧ ಬಸ್ ತಡೆದು ಚಳವಳಿ ನಡೆಸಿರುವುದಾಗಿ ದೂರಲಾಗಿದೆ. ಚಳವಳಿಗೆ ಶಾಶ್ವತ ಪರಿಹಾರ ಕಾಣದಿದ್ದರೆ ಈ ರೂಟ್‌ನಲ್ಲಿ ವಾಹನ ಸಂಚಾರಕ್ಕೆ ಸಂದಿಗ್ಧತೆ ಎದುರಾಗಲಿದೆಯೆಂಬ ಆತಂಕ ಉಂಟಾಗಿದೆ.