ವಿನ್‌ಟಚ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಾಳೆ ಆರೋಗ್ಯ ಸಚಿವೆಯಿಂದ ಉದ್ಘಾಟನೆ

ಕಾಸರಗೋಡು: ಕಾಸರಗೋಡು ನಗರದ ಬ್ಯಾಂಕ್ ರಸ್ತೆ ಬಳಿ ನೂತನವಾಗಿ ನಿರ್ಮಿಸಲಾಗಿರುವ ವಿನ್-ಟಚ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು  ನಾಳೆ  ಬೆಳಿಗ್ಗೆ ೧೦ ಗಂಟೆಗೆ ನಡೆಯುವ ಸಮಾರಂಭದಲ್ಲಿ ರಾಜ್ಯ ಆರೋಗ್ಯ ಮತ್ತು ಶಿಶು ಕಲ್ಯಾಣ ಖಾತೆ ಸಚಿವೆ ವೀಣಾ ಜೋರ್ಜ್ ಉದ್ಘಾಟಿಸು ವರೆಂದು ಈ ಪ್ರಯುಕ್ತ  ಪ್ರೆಸ್ ಕ್ಲಬ್‌ನಲ್ಲಿ ಕರೆದ ಪತ್ರಿಕಾಗೋಷ್ಠಿ ಯಲ್ಲಿ ಪ್ರಸ್ತುತ ಆಸ್ಪತ್ರೆಯ ಫೌಂಡೇಶನ್ ಚೇಯರ್ ಮೆನ್ ಅಬ್ದುಲ್ ಲತೀಫ್ ಉಪ್ಪಳಗೇಟ್, ಫೌಂಡರ್ ಡೈರೆಕ್ಟರ್‌ಗಳಾದ ಅಬ್ದುಲ್ ಕರೀಂ ಕೋಳಿಯಾಟ್, ಹನೀಫ್ ಅರಮನ ಮೊದಲಾದವರು ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್, ಶಾಸಕರಾದ ಎನ್.ಎ. ನೆಲ್ಲಿಕುನ್ನು, ಎಕೆಎಂ ಅಶ್ರಫ್, ಸಿ.ಎಚ್. ಕುಂಞಂಬು, ಇ. ಚಂದ್ರಶೇಖರನ್, ಎಂ. ರಾಜಗೋಪಾಲನ್, ಜಿಲ್ಲಾಧಿ ಕಾರಿ ಕೆ. ಇಂಭಶೇಖರ್, ಜಿಲ್ಲಾ ವೈದ್ಯಾಧಿಕಾರಿ ಡಾ| ಎ.ವಿ. ರಾಮ್‌ದಾಸ್ ಮೊದಲಾದ ಗಣ್ಯರು ಭಾಗವಹಿಸುವರು. ಅಂತಾರಾ ಷ್ಟ್ರೀಯ ಗುಣಮಟ್ಟದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಇದಾಗಿದೆ. ಕೋವಿಡ್ ಕಾಲದಲ್ಲಿ ಚಿಕಿತ್ಸೆಗಾಗಿ ಮಂಗಳೂರಿಗೆ ಹೋಗುವ ದಾರಿ ಮುಚ್ಚಿಕೊಂಡ ಕಾರಣದಿಂದಾಗಿ ಸಕಾಲದಲ್ಲಿ ಚಿಕಿತ್ಸೆ ಲಭಿಸದೆ ಕಾಸರಗೋಡಿನ ಹಲವು ಮಂದಿ ಪ್ರಾಣ ಕಳೆದುಕೊಂಡಿದ್ದರು. ಅವರ ಕುಟುಂಬಗಳ ಕಣ್ಣೀರು ಕಂಡು ಎಲ್ಲಾ ರೋಗಗಳಿಗೂ ಕಾಸರಗೋಡಿನಲ್ಲೇ ಚಿಕಿತ್ಸೆ ಲಭಿಸುವಂತೆ ಮಾಡುವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸುವುದಾಗಿ ಅಂದು ನಾವು ತಿಳಿಸಿದ್ದೆವು. ಆ ಮಾತನ್ನು ನಾವು ಪಾಲಿಸಿರುವುದಾಗಿ ಅಬ್ದುಲ್ ಲತೀಫ್  ಉಪ್ಪಳಗೇಟ್ ತಿಳಿಸಿದ್ದಾರೆ.

ದೈನಂದಿನ ೨೪ ತಾಸುಗಳ ತನಕ ಕಾರ್ಯವೆಸಗುವ ಎಮರ್ಜೆನ್ಸಿ ಟೀಂ, ಅತ್ಯಾಧುನಿಕ ಸಿಟಿ ಸ್ಕ್ಯಾನ್, ಎಂಆರ್‌ಐ ಸ್ಕ್ಯಾನಿಂಗ್, ಡಯಾಬಿಟಿಕ್ ಕೇರ್ ಇತ್ಯಾದಿ ಅತ್ಯುತ್ತಮ  ಸ್ಪೆಷಾಲಿಟಿ ಸೌಕರ್ಯಗಳು, ಸೂಪರ್ ಸ್ಪೆಷಾಲಿಟಿ ವೈದ್ಯರುಗಳ ಸೇವೆ ಈ ಆಸ್ಪತ್ರೆಯಲ್ಲಿ ಲಭಿಸಲಿದೆ. ಮಾತ್ರವಲ್ಲ ಅತ್ಯಾಧುನಿಕ ಲ್ಯಾಬ್ ಸೌಕರ್ಯಗಳು ಈ ಐದು ಅಂತಸ್ಥಿನ ಆಸ್ಪತ್ರೆ ಹೊಂದಿದೆಯೆಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಲಾಯಿತು.  ಆಸ್ಪತ್ರೆಯ ಮೆನೇಜಿಂಗ್ ಡೈರೆಕ್ಟರ್ ಡಾ| ಇಸ್ಮಾಯಿಲ್ ಪವಾಸ್, ಮೆಡಿಕಲ್ ಡೈರೆಕ್ಟರ್ ಡಾ| ಮುನಾವರ್ ಡ್ಯಾನಿಶ್,  ಡೈರೆಕ್ಟರ್‌ಗಳಾದ ಡಾ| ಹನೀಸ ಹನೀಫ್, ಡಾ| ಆಯುಷತ್ ಶಕೀಲಾ, ಮೊಹಮ್ಮದ್ ಇರ್ಷಾದ್ ಮತ್ತು ಮೊಹಮ್ಮದ್ ದಿಶ್ಶಾದ್ ಎಂಬವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದು ಮಾಹಿತಿ ನೀಡಿದರು.

Leave a Reply

Your email address will not be published. Required fields are marked *

You cannot copy content of this page