ಜುಲೈ ತಿಂಗಳ ಸಾಮಾಜಿಕ ಪಿಂಚಣಿ ವಿತರಣೆ ನ. ೧೬ರಿಂದ
ತಿರುವನಂತಪುರ: ಜುಲೈ ತಿಂಗಳ ಸಾಮಾಜಿಕ ಪಿಂಚಣಿ ವಿತರಣೆಗಾಗಿ ೯೦೦ ಕೋಟಿ ರೂ. ಬಿಡುಗಡೆಗೊಳಿ ಸಲಾಗುವುದೆಂದು ಹಣಕಾಸು ಸಚಿವ ಕೆ.ಎನ್. ಬಾಲಗೋಪಾಲನ್ ತಿಳಿಸಿದ್ದಾರೆ. ನವಂಬರ್ ೧೬ರಿಂದ ಪಿಂಚಣಿ ವಿತರಿಸಲಾಗುವುದು. ಇದರಂತೆ ಪಿಂಚಣಿದಾರರಿಗೆ ತಲಾ ೧೬೦೦ ರೂ.ನಂತೆ ಲಭಿಸಲಿದೆ. ಪಿಂಚಣಿಗಾಗಿ ಮಸ್ಟರಿಂಗ್ ನಡೆಸಿದವರು, ನಿಧನಹೊಂದಿದ ಪಿಂಚಣಿದಾರರು, ಮರು ವಿವಾಹವಾಗಿಲ್ಲವೆಂದು ಸಾಬೀತುಪಡಿಸುವ ಸರ್ಟಿಫಿಕೇಟ್ ಹಾಜರುಪಡಿಸದ ವಿಧವೆಯರಿಗೆ ಜುಲೈಯಿಂದ ಪಿಂಚಣಿ ಲಭಿಸದು. ಇದರಿಂದಾಗಿ ರಾಜ್ಯದಲ್ಲಿ ಒಟ್ಟು ಏಳು ಲಕ್ಷದಷ್ಟು ಮಂದಿ ಪಿಂಚಣಿ ಸವಲತ್ತಿನಿಂದ ಹೊರಬೀಳಲಿದ್ದಾರೆಂದು ಸರಕಾರ ಲೆಕ್ಕಹಾಕಿದೆ. ಜುಲೈ ತಿಂಗಳ ಪಿಂಚಣಿಯನ್ನು ಈ ತಿಂಗಳು ವಿತರಿಸುವ ತೀರ್ಮಾನ ಸರಕಾರ ಕೈಗೊಂಡಿದ್ದರೂ ಅಗೋಸ್ತ್, ಸೆಪ್ಟಂಬರ್ ಮತ್ತು ಅಕ್ಟೋಬರ್ ತಿಂಗಳ ಪಿಂಚಣಿ ಎಂದು ವಿತರಣೆಗೊಳ್ಳು ವುದೆಂಬ ಕನಿಷ್ಠ ಪೂರ್ವಸೂಚನೆಯನ್ನು ಸರಕಾರ ಈತನಕ ನೀಡಿಲ್ಲ.