ವಿಶ್ವಹಿಂದೂ ಪರಿಷತ್ ವತಿಯಿಂದ ಸಾಮೂಹಿಕ ಗೋಪೂಜೆ

ಕಾಸರಗೋಡು: ವಿಶ್ವಹಿಂದೂ ಪರಿಷತ್ ವತಿಯಿಂದ ಪೇಟೆ ಶ್ರೀ ವೆಂಕಟ್ರಮಣ ದೇವಸ್ಥಾನದಲ್ಲಿ ಸಾಮೂಹಿಕ ಗೋಪೂಜೆ ನಡೆಯಿತು. ಇದರಂಗವಾಗಿ ನಡೆದ ಸಭಾ ಕಾರ್ಯಕ್ರಮದಲ್ಲಿ ಕಾಸರಗೋಡು ನಗರಸಮಿತಿ ಅಧ್ಯಕ್ಷ ಕಮಲೇಶನ್ ಅಧ್ಯಕ್ಷತೆ ವಹಿಸಿದರು. ಮಾತೃಮಂಡಳಿ ಅಧ್ಯಕ್ಷೆ ಶಾರದ ಉಪಸ್ಥಿತರಿದ್ದರು. ಧಾರ್ಮಿಕ ಮುಂದಾಳು ಕೆ.ಎನ್. ವೆಂಕಟ್ರಮಣ ಹೊಳ್ಳ ಗೋವಿನ ಮಹತ್ವದ ಬಗ್ಗೆ ವಿವರಿಸಿದರು. ವಿ.ಹಿಂ.ಪ ನೇತಾರ ರಾಮಕೃಷ್ಣ ಹೊಳ್ಳ ಸ್ವಾಗತಿಸಿದರು. ಪೇಟೆ ಶ್ರೀ ವೆಂಕಟ್ರಮಣ ಬಾಲಗೋಕುಲದ ಮಕ್ಕಳು ಪ್ರಾರ್ಥನೆ ಹಾಡಿದರು. ಸಮಿತಿ ಸದಸ್ಯರಾದ ಕಿಶೋರ್ ಎಸ್‌ವಿಟಿ ವಂದಿಸಿದರು. ವಿ.ಎಚ್.ಪಿ ಕೋಶಾಧಿಕಾರಿ ಲಕ್ಷ್ಮಿಕಾಂತ ನಿರೂಪಿಸಿದರು. ಕಾರ್ಯಕರ್ತರಿಂದಲೂ, ಮಾತೆಯರಿಂದಲೂ ಗೋಪೂಜೆ ನಡೆಸಲಾಯಿತು.

You cannot copy contents of this page