ಜಿಲ್ಲಾ ಪೊಲೀಸ್  ವರಿಷ್ಠಾಧಿಕಾರಿಗೆ ಬೀಳ್ಕೊಡುಗೆ

ಕಾಸರಗೋಡು: ಜಿಲ್ಲಾ ಪೊಲೀಸ್ ಅಧಿಕಾರಿ ಡಾ. ವೈಭವ್ ಸಕ್ಸೇನಾರಿಗೆ ಜಿಲ್ಲಾಡಳಿತದಿಂದ ಬೀಳ್ಕೊಡುಗೆ ನೀಡಲಾಯಿತು. ಕಾಸರಗೋಡು ಕಲೆಕ್ಟರೇಟ್ ಮಿನಿ ಕಾನ್ಫರೆನ್ಸ್  ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕೆ. ಇಂಭಶೇಖರ್ ಅಧ್ಯಕ್ಷತೆ ವಹಿಸಿದರು. ರಾಜ್ಯದಲ್ಲಿ ಅತ್ಯಂತ ಹೆಚ್ಚು ಕಾಪಾ ಪ್ರಕರಣಗಳನ್ನು ಲೋಪದೋಷವಿಲ್ಲದೆ ಜ್ಯಾರಿಗೊಳಿಸಲು ಸಾಧ್ಯವಾಗಿರುವುದು ಜಿಲ್ಲಾ ಪೊಲೀಸ್ ಹಾಗೂ ಆಡಳಿತದ ಒಟ್ಟಾದ ಪ್ರಯತ್ನದಿಂದ ಎಂದೂ, ಅದಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೀಡಿದ ನೇತೃತ್ವ ಪ್ರಶಂಸನೀಯವೆಂದು ಜಿಲ್ಲಾಧಿಕಾರಿ ನುಡಿದರು. ಎಡಿಎಂ ಕೆ. ನವೀನ್‌ಬಾಬ, ಸಹಾಯಕ ಜಿಲ್ಲಾಧಿಕಾರಿ ಸೂಫಿಯಾನ್ ಅಹಮ್ಮದ್, ಆರ್‌ಡಿಒ ಅಥುಲ್ ಸ್ವಾಮಿನಾಥ್, ಕಾನೂನು ಅಧಿಕಾರಿ ಕೆ. ಮುಹಮ್ಮದ್ ಕುಂಞಿ, ಜಿಲ್ಲಾ ಮಾಹಿತಿ ಅಧಿಕಾರಿ ಕೆ. ಮಧುಸೂಧನನ್, ಜಿಲ್ಲಾ ಚೈಲ್ಡ್ ಪ್ರೊಟೆಕ್ಷನ್ ಆಫೀಸರ್ ಶೈನಿ, ಎಂಪ್ಲೋಯ್‌ಮೆಂಟ್ ಆಫೀಸರ್  ಅಜಿತ್ ಕೆ ಜೋನ್ ಮಾತನಾಡಿದರು. ಡಿವೈಎಸ್ಪಿಗಳಾದ ಪಿ. ಬಾಲಕೃಷ್ಣನ್ ನಾಯರ್, ಪಿ.ಕೆ. ಸುಧಾಕರನ್, ಸಿ.ಕೆ. ಸುನಿಲ್ ಕುಮಾರ್, ವಿ. ಮನೋಜ್ ಭಾಗವಹಿಸಿದರು.

RELATED NEWS

You cannot copy contents of this page