ನಾಪತ್ತೆಯಾದ ಮೀನು ಕಾರ್ಮಿಕನ ಮಾಹಿತಿ ಅಲಭ್ಯ: ಶ್ವಾನದಳದಿಂದ ಶೋಧ

ಮಂಜೇಶ್ವರ: ಕಳೆದ ಆರು ದಿನಗಳಿಂದ ನಿಗೂಢವಾಗಿ ನಾಪತ್ತೆಯಾಗಿರುವ ಮಂಜೇಶ್ವರ ಚರ್ಚ್ ಬೀಚ್ ರಸ್ತೆ ಬಳಿಯ ನಿವಾಸಿ ರೋಷನ್ ಮೊಂತೆರೋ (೪೨)ರ ಪತ್ತೆಗಾಗಿ ಶೋಧ ಮುಂದುವರಿಸಲಾಗಿದೆ.  ನಿನ್ನೆ ಶ್ವಾನದಳವನ್ನು ಕರೆತಂದು ಶೋಧ ನಡೆಸಲಾಗಿದೆ. ಮನೆ ಬಳಿಯ ಸಮುದ್ರ ಕಿನಾರೆಯಲ್ಲಿ  ಶೋಧ ನಡೆಸಿದ್ದು ಆದರೆ ಯಾವುದೇ ಸುಳಿವು ಸಂಗ್ರಹಿಸಲಾಗಲಿಲ್ಲ. ಕಳೆದ ಶನಿವಾರ ರಾತ್ರಿ ೧೧.೪೫ರ ಬಳಿಕ ರೋಷನ್ ಕ್ರಾಸ್ತ ಮನೆಯಿಂದ ನಾಪತ್ತೆಯಾಗಿದ್ದರು. ಮೊಬೈಲ್, ಪರ್ಸ್, ಚಪ್ಪಲಿ, ಉಂಗುರ ಮೊದಲಾದವುಗಳನ್ನು  ಮನೆಯಲ್ಲಿರಿಸಲಾಗಿದೆ. ಆದಿತ್ಯವಾರದಿಂದಲೇ ಅವರಿಗಾಗಿ ಶೋಧ ಆರಂಭಿಸಲಾಗಿದೆ. ಮಂಜೇಶ್ವರ ಪೊಲೀಸರು ಹಾಗೂ ಕರಾವಳಿ ಪೊಲೀಸರು ಕೂಡಾ ಶೋಧ ನಡೆಸುತ್ತಿದ್ದಾರೆ.

You cannot copy contents of this page