ಪೆರ್ಮುದೆಯಲ್ಲಿ ಬಿಜೆಪಿ ಜನ ಪಂಚಾಯತ್ ಸಭೆ

ಪೈವಳಿಕೆ: ಬಿಜೆಪಿ ಪೈವಳಿಕೆ ಸೌತ್ ಸಮಿತಿ ಜನ ಪಂಚಾಯತ್ ಕಾರ್ಯ ಕ್ರಮ ಪೆರ್ಮುದೆ ಪೇಟೆಯಲ್ಲಿ ಜರಗಿದ್ದು, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸುಧಾಮ ಗೋಸಾಡ ಉದ್ಘಾಟಿಸಿ ದರು. ಅವರು ಮಾತನಾಡಿ ಮಂಜೇ ಶ್ವರ ಶಾಸಕ ಎಕೆಎಂ ಅಶ್ರಫ್ ನಿರಂತರ ವಿದೇಶ ಯಾತ್ರೆ ನಡೆಸುತ್ತಿದ್ದು, ಇದರ ಉದ್ದೇಶ ನಿಗೂಢವಾಗಿದೆಯೆಂದು  ಆರೋಪಿಸಿದರು. ರಾಜ್ಯ ಸರಕಾರ ಮಂಜೇಶ್ವರ ಮಂಡಲವನ್ನು ನಿರಂತರ ಅವಗಣಿಸುತ್ತಿದ್ದು, ಪೈವಳಿಕೆ ಪಂ.ನಲ್ಲಿ  ಕಾರ್ಯದರ್ಶಿ ಇಲ್ಲದ ಕಾರಣ ಹಲವಾರು ಯೋಜನೆಗಳ ಫಂಡ್ ನಷ್ಟವಾಗಿದೆಯೆಂದವರು ದೂರಿದರು.

ವಿಘ್ನೇಶ್ವರ ಮಾಸ್ತರ್ ಕೆದುಕೋಡಿ ಅಧ್ಯಕ್ಷತೆ ವಹಿಸಿದರು. ಮಂಡಲ ಅಧ್ಯಕ್ಷ ಆದರ್ಶ್ ಬಿ.ಎಂ, ಮುಖಂಡರಾದ ಮಣಿಕಂಠ ರೈ, ಅಶ್ವಿನಿ ಪಜ್ವ, ಎ.ಕೆ. ಕಯ್ಯಾರ್, ಸುಬ್ರಹ್ಮಣ್ಯ ಭಟ್, ಬಾಲಕೃಷ್ಣ, ಚಂದ್ರಾವತಿ, ಸದಾಶಿವ ಚೇರಾಲ್ ನೇತೃತ್ವ ನೀಡಿ ದರು. ಸತೀಶ್ ಸ್ವಾಗತಿಸಿ, ಪ್ರಶಾಂತ್ ಜೋಡುಕಲ್ಲು ವಂದಿಸಿದರು.

You cannot copy contents of this page