ಪೊಸಡಿಗುಂಪೆಯಲ್ಲಿ ಪೈವಳಿಕೆ ಪಂ. ಸಮಿತಿ ನೇತೃತ್ವದಲ್ಲಿ ಶುಚೀಕರಣ
ಪೈವಳಿಕೆ : ಜಿಲ್ಲೆಯ ಪ್ರಸಿದ್ದ ಪ್ರವಾಸೋದ್ಯಮ ಕೇಂದ್ರವಾದ ಪೊಸಡಿ ಗುಂಪೆ ಟೂರಿಸಂ ಕೇಂದ್ರವನ್ನು ಹಸಿರು ಟೂರಿಸಂ ಕೇಂದ್ರವಾಗಿಸುವ ಉದ್ದೇಶದಿಂದ ಪೈವಳಿಕೆ ಪಂಚಾಯತ್ ಆಡಳಿತ ಸಮಿತಿಯ ನೇತೃತ್ವದಲ್ಲಿ ಜನಪರ ಶುಚೀಕರಣ ಕಾರ್ಯಕ್ರಮ ನಿನ್ನೆ ನಡೆಯಿತು. ಪೈವಳಿಕೆ ಪಂಚಾಯತ್ ಅಧ್ಯಕ್ಷೆ ಜಯಂತಿ.ಕೆ ಉದ್ಘಾಟಿಸಿದರು. ಪೈವಳಿಕೆ ಪಂಚಾಯತ್ ಅಭಿವೃದ್ಧಿ ಕಾರ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ರಝಾಕ್ ಚಿಪ್ಪಾರು ಅಧ್ಯಕ್ಷತೆ ವಹಿಸಿದ್ದರು. ಪಂಚಾಯತ್ ಸದಸ್ಯರಾದ ಅಬ್ದುಲ್ಲಾ.ಕೆ, ಶ್ರೀನಿವಾಸ ಭಂಡಾರಿ,ರಹಮತ್ ರಹಿಮಾನ್, ಇರ್ಷನ.ಎಸ್, ಅವಿನಾಶ್ ಮಚಾದೋ, ನವ ಕೇರಳ ರಿಸೋರ್ಸ್ ಪರ್ಸನ್ ವಿನಯ್ ಕುಮಾರ್ ಬಿ, ಬಿನೀಶ್, ಜೀವನ್ ಎಂಬಿವರು ಮಾತನಾಡಿದರು. ಪಂಚಾಯತ್ ಸದಸ್ಯೆ ಗೀತಾ. ಎಂ ಸ್ವಾಗತಿಸಿದರು. ಶ್ರೀರಾಮ ವಂದಿಸಿದರು. ಹಸಿರು ಕ್ರಿಯÁ ಸೇನೆ ಸದಸ್ಯರು, ಎನ್ಎಸ್ಎಸ್ ಕಾರ್ಯಕರ್ತರು, ಊರಿನವರು, ಸಂಫ- ಸಂಸ್ಥೆಯ ಕಾರ್ಯಕರ್ತರು ಭಾಗವಹಿಸಿದರು.