ಮುಳ್ಳೇರಿಯ: ನಕಲಿ ಮತದಾನದ ವಿರುದ್ಧ ಪ್ರತಿಕ್ರಿಯಿಸಿದ ಲೋಕಸಭೆಯ ವಿಪಕ್ಷ ಮುಖಂಡ ರಾಹುಲ್ ಗಾಂಧಿಯನ್ನು ಬಂಧಿಸಿರುವುದನ್ನು ಪ್ರತಿಭಟಿಸಿ ಕಾರಡ್ಕ ಬ್ಲೋಕ್ ಕಾಂಗ್ರೆಸ್ ಸಮಿತಿ ವತಿಯಿಂದ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಮುಳ್ಳೇರಿಯದಲ್ಲಿ ನಡೆದ ಪ್ರತಿಭಟನೆಗೆ ಬ್ಲೋಕ್ ಸಮಿತಿ ಅಧ್ಯಕ್ಷ ಗೋಪಕುಮಾರ್ ವಿ, ಕೆ. ವಾರಿಜಾಕ್ಷನ್, ಆನಂದ ಮವ್ವಾರ್, ಇಬ್ರಾಹಿಂ ಹಾಜಿ ಸಿ, ಶ್ರೀಧರನ್ ಅಯರ್‌ಕಾಡ್, ಪ್ರಸಾದ್ ಭಂಡಾರಿ, ಗಂಗಾಧರ ಗೋಳಿಯಡ್ಕ, ಶ್ಯಾಮ್‌ಪ್ರಸಾದ್ ಮಾನ್ಯ, ಪುರುಷೋತ್ತಮನ್ ಕೆ, ಜ್ಯೋನಿ ಕ್ರಾಸ್ತ, ವಿನೋದನ್ ನಂಬ್ಯಾರ್ ಬಿ.ಕೆ., ಚಂದ್ರಹಾಸ ಬಲೆಕ್ಕಳ, ರಂಜಿತ್ ಕುಮಾರ್, ಶಾರದಾ ಇ, ರೂಪ ಸತ್ಯನ್, ಮುಹಮ್ಮದ್ ಕುಂಞಿ, ಶ್ರೀನಾಥ್ ಬದಿಯಡ್ಕ, ಗೋಪಿನಾಥನ್ ಕೋಣಲ, ಅಶ್ರಫ್, ಶಂಸು, ಗುರುಪ್ರಸಾದ್ ನೇತೃತ್ವ ನೀಡಿದರು.
