ಕಾಸರಗೋಡು: ಸ್ಥಳೀಯಾಡ ಳಿತ ಸಂಸ್ಥೆಗಳ ವಾರ್ಡ್ ವಿಭಜನೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಇದರಂತೆ ಜಿಲ್ಲೆಯಲ್ಲಿ ಗ್ರಾಮ ಪಂಚಾಯತ್ಗಳ ವಾರ್ಡ್ಗಳ ಸಂಖ್ಯೆ ಈಗ 664ರಿಂದ 725ಕ್ಕೇರಿದೆ. 2011ರ ಜನಗಣತಿ ಆಧಾರದಲ್ಲಿ ವಾರ್ಡ್ಗಳ ಮರು ವಿಭಜನೆ ನಡೆಸಲಾಗಿದೆ. ಇದರ ಜೊತೆಗೆ ಪ್ರತೀ ವಾರ್ಡ್ಗಳ ಡಿಜಿಟಲ್ ಭೂಪಟಗಳನ್ನು ತಯಾರಿಸಲಾಗಿದೆ. ಇದರ ಹೊರತಾಗಿ ಜಿಲ್ಲೆಯ ಕಾಸರಗೋಡು, ಹೊಸದುರ್ಗ ಮತ್ತು ನೀಲೇಶ್ವರ ನಗರಸಭೆಗಳ ವಾರ್ಡ್ ಗಳ ಸಂಖ್ಯೆ, ವಾರ್ಡ್ಗಳ ಮರು ವಿಭಜನೆ ಬಳಿಕ ವಾರ್ಡ್ಗಳ ಸಂಖ್ಯೆ 113ರಿಂದ 120ಕ್ಕೇರಿದೆ. ಅದೇ ರೀತಿ ಬ್ಲೋಕ್ ಪಂಚಾ ಯತ್ಗಳ ವಾರ್ಡ್ಗಳ ಸಂಖ್ಯೆ 83ರಿಂದ 92ಕ್ಕೇರಿದೆ. ಅದೇ ರೀತಿ ತ್ರಿಸ್ತರ ಪಂಚಾಯತ್ನ ಡಿವಿಶನ್ ಸಂಖ್ಯೆ ಈಗಿನ 17ರಿಂದ 18ಕ್ಕೇರಿದೆ. ಪ್ರಸ್ತುತ ಪಂಚಾ ಯತ್ ಗಳಿಗೆ ಕಳೆದ ಬಾರಿ ನಡೆದ ಚುನಾವಣೆಯ ವೇಳೆ ಜಿಲ್ಲೆಯಲ್ಲಿ 877 ವಾರ್ಡ್ಗಳಿದ್ದವು. ಅದು ಈಗ 955ಕ್ಕೇರಿದೆ.
