ಕೇಂದ್ರ ಸಚಿವ ಸುರೇಶ್‌ಗೋಪಿ ಕಚೇರಿಯ ನಾಮಫಲಕಕ್ಕೆ ಕರಿ ಆಯಿಲ್ ಸುರಿದ ದುಷ್ಕರ್ಮಿಗಳು: ಬಿಜೆಪಿಯಿಂದ ವ್ಯಾಪಕ ಪ್ರತಿಭಟನೆ

ತೃಶೂರು: ಕೇಂದ್ರ ಸಚಿವ ಸುರೇಶ್ ಗೋಪಿಯವರ ಕಚೇರಿಯ ನಾಮಫಲ ಕಕ್ಕೆ ದುಷ್ಕರ್ಮಿಗಳು ಕರಿ ಆಯಿಲ್ ಸುರಿದು ವಿಕೃತಗೊಳಿ ಸಿದ್ದಾರೆ. ಇದನ್ನು ಪ್ರತಿಭಟಿಸಿ ಬಿಜೆಪಿ ಇಂದು ರಾಜ್ಯ ವ್ಯಾಪಕವಾಗಿ ಪ್ರತಿಭಟನೆ ಆರಂಭಿಸಿದೆ.

ತೃಶೂರಿನ ಚೇರೂರ್‌ನಲ್ಲಿ ಸುರೇಶ್‌ಗೋಪಿಯ ಎಂ.ಪಿ ಕಚೇರಿ ಇದ್ದು ಅದರ ನಾಮಫಲಕಕ್ಕೆ ನಿನ್ನೆ ಸಂಜೆ ಕರಿ ಆಯಿಲ್ ಪ್ರಯೋಗ ನಡೆಸಲಾಗಿದೆ. ಇದು ಸಿಪಿಎಂ ನಡೆಸಿದ ದುಷ್ಕೃತ್ಯವಾಗಿದೆಯೆಂದು ಬಿಜೆಪಿ ಆರೋಪಿಸಿದೆ. ಅದರ ವಿರುದ್ಧ ತೃಶೂರಿನಾದ್ಯಂತ ಭಾರೀ ಪ್ರತಿಭಟನೆ ನಡೆಸಿದೆ. ಪ್ರತಿಭಟನಾ ಮೆರವಣಿಗೆ ಘರ್ಷಣೆಗೂ ದಾರಿ ಮಾಡಿಕೊಟ್ಟಿತು.  ಅದರಲ್ಲಿ ಬಿಜೆಪಿ ಅಧ್ಯಕ್ಷ ಜಸ್ಟೀನ್ ಜೇಕಬ್ ಮತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಕೆ. ಬಾಬು ಮೊದಲಾದವರು ಗಾಯಗೊಂಡರು.

ತೃಶೂರು ಲೋಕಸಭಾ ಕ್ಷೇತ್ರದ ಮತದಾರ ಯಾದಿಯಲ್ಲಿ ವ್ಯಾಪಕ ಅವ್ಯವಹಾರ ನಡೆದಿದೆಯೆಂದು ಆರೋಪಿಸಿ ಸುರೇಶ್ ಗೋಪಿಯವರ ಎಂ.ಪಿ. ಕಚೇರಿಗೆ ನಿನ್ನೆ ಸಿಪಿಎಂ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿದ್ದರು. ಅದನ್ನು ಪ್ರತಿಭಟಿಸಿ ಬಿಜಪಿ ಕಾರ್ಯಕರ್ತರು ಸಿಪಿಎಂನ ತೃಶರು ಜಿಲ್ಲಾ ಸಮಿತಿ ಕಚೇರಿಗೆ ಬಳಿಕ ಪ್ರತಿಭಟನಾ ಮೆರವಣಿಗೆ ನಡೆಸಿದರು. ಅದನ್ನು ಪೊಲೀಸರು ತಡೆದರೂ ಬಿಜೆಪಿ ನೇತಾರ ನ್ಯಾ.ಉಲ್ಲಾಸ್ ಬಾಬು  ಮಾರ್ಚ್ ಉದ್ಘಾಟಿಸಿದರು.

You cannot copy contents of this page