ಕುಂಬಳೆ: ಮೂಲತಃ ಇಡುಕ್ಕಿ ನೆಡುಕಂಡಂ ನಿವಾಸಿ ಕುಂಬಳೆ ಕಂಚಿಕಟ್ಟೆ ಶ್ರೀರಾಘದಲ್ಲಿ ವಾಸಿಸುತ್ತಿರುವ ನಿವೃತ್ತ ಎಇಒ ವಿಜಯನ್ ಕೆ.ಟಿ.(63) ನಿಧನ ಹೊಂದಿದರು. ಹಲವು ವರ್ಷಗಳ ಕಾಲ ಕುಂಬಳೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಮಲೆಯಾಳ ಅಧ್ಯಾಪಕನಾಗಿದ್ದರು. ಮೃತರು ಪತ್ನಿ ಗೀತ ಕೆ.(ಸೂರಂಬೈಲು ಸರಕಾರಿ ಹೈಸ್ಕೂಲ್ ಅಧ್ಯಾಪಿಕೆ), ಮಕ್ಕಳಾದ ಅರ್ಜುನ್ ವಿಜಯ್, ತೇಜಸ್ ವಿಜಯ್, ಸಹೋದರ ಸುರೇಶ್, ಸಹೋದರಿಯರಾದ ಉಷಾ, ಶೀಜ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮೃತದೇಹವನ್ನು ಹುಟ್ಟೂರಾದ ವಯನಾಡು ಕಾಟಿ ಕುಳಂಗೆ ಕೊಂಡೊಯ್ಯಲಾಗುವು ದೆಂದು ಸಂಬಂಧಿಕರು ತಿಳಿಸಿದ್ದಾರೆ.
