ಕಾಸರಗೋಡು: ಚಪ್ಪರ ನಿರ್ಮಾಣ ಕಾರ್ಮಿಕನಾದ ಯುವಕ ಮನೆಯ ಬೆಡ್‌ರೂಂನಲ್ಲಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಮೇಲ್ಪರಂಬ ಪೊಲೀಸ್ ಠಾಣೆ ವ್ಯಾಪ್ತಿಯ ದೇಳಿ ಕುನ್ನುಪಾರದ ದಾಮೋದರನ್ ಎಂಬವರ ಪುತ್ರ ಧನುಷ್ (21) ಮೃತ ಯುವಕನಾಗಿದ್ದಾರ. ಮೊನ್ನೆ ರಾತ್ರಿ ಊಟಮಾಡಿ ಮಲಗಿದ್ದ ಧನುಷ್ ನಿನ್ನೆ ಬೆಳಿಗ್ಗೆ ಎದ್ದಿರಲಿಲ್ಲ. ಇದರಿಂದ ಮನೆಯವರು ಎಬ್ಬಿಸಲು ಕೊಠಡಿಗೆ ಹೋದಾಗ ಧನುಷ್ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿ ದ್ದರು. ಕೂಡಲೇ ಅವರನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ.
ಮೃತರು ತಂದೆ, ತಾಯಿ ಗೀತಾ, ಸಹೋದರ ದೀಕ್ಷಿತ್, ಸಹೋದರಿ ದಿವ್ಯಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.