ದೇಲಂಪಾಡಿ: ದೇಲಂಪಾಡಿಯ ವಿವಿಧ ಪ್ರದೇಶಗಳ ಜನರು ಸಂಚಾರ ಸಂಕಷ್ಟದಿಂದ ಬಳಲುತ್ತಿರುವುದಕ್ಕೆ ಪರಿಹಾರ ಕೈಗೊಳ್ಳಲು ಪಂಚಾಯತ್ ಸಿದ್ಧವಾಗಿದೆ. ಇದರಂಗವಾಗಿ ಪಂಚಾಯತ್‌ನ ರಸ್ತೆಗಳನ್ನು ಪುನರುದ್ಧರಿಸುವ ಯೋಜನೆಯಲ್ಲಿ ಒಳಪಡಿಸಿ ೧೫ ಲಕ್ಷ ರೂ.ನಂತೆ ವೆಚ್ಚದಲ್ಲಿ ನಿರ್ಮಿಸುವ ಮೂರು ರಸ್ತೆಗಳ ಕಾಮಗಾರಿ ಉದ್ಘಾಟನೆಯನ್ನು ಇಂದು ಶಾಸಕ ಸಿ.ಎಚ್. ಕುಂಞಂಬು ನಿರ್ವಹಿಸುವರು. ಇದರೊಂದಿಗೆ ದೇಲಂಪಾಡಿಯ ವಿವಿಧ ಪ್ರದೇಶಗಳಿಗೆ, ಕುತ್ತಿಕ್ಕೋಲ್ ಪಂಚಾಯತ್‌ನ ವಿವಿಧ ಭಾಗಗಳಿಗೆ, ಅಂತಾರಾಜ್ಯ ಹೆದ್ದಾರಿಗಿರುವ ಸಂಚಾರ ಸುಲಭವಾಗಲಿದೆ.
ಪರಿಶಿಷ್ಟ ಪಂಗಡದವರ ಕೇಂದ್ರವಾದ ಕಯರ್ತೋಡಿ ಕರ್ನಾಟಕ ಗಡಿಗೆ ಹೊಂದಿಕೊಂಡಿರುವ ಪ್ರದೇಶವಾಗಿದೆ.
ಕೆಸರು, ಮಣ್ಣು ತುಂಬಿದ ಇಲ್ಲಿನ ರಸ್ತೆಗಳಲ್ಲಿ ಮಳೆಗಾಲದಲ್ಲಿ ಪ್ರಯಾಣ ಸಂಕಷ್ಟಪೂರ್ಣವಾಗಿದೆ. ಕಯರ್ತೋಡಿ- ಗುಂಡಿಕಂಡ ರಸ್ತೆ ಸಾಕ್ಷಾತ್ಕಾರವಾಗುವು ದರೊಂದಿಗೆ ಕರ್ನಾಟಕದ ಪ್ರದೇಶವಾದ ಮಂಡೆಕೋಲಿಗಿರುವ ಪರಿಶಿಷ್ಟ ಪಂಗಡದವರ ಪ್ರಯಾಣ ಸುಲಲಿತವಾ ಗಲಿದೆ. ಕುತ್ತಿಕ್ಕೋಲ್ ಪಂಚಾಯತ್‌ನ ಬಂದಡ್ಕವನ್ನು ದೇಲಂಪಾಡಿ ಪಂಚಾಯತ್‌ನ ವಿವಿಧ ಪ್ರದೇಶಗಳೊಂದಿಗೆ ಜೋಡಿಸುವ ಅಣ್ಣಪ್ಪಾಡಿ- ಭಂಡಾರಗುಳಿ ರಸ್ತೆ ಸಾಕ್ಷಾತ್ಕಾರಗೊಂಡರೆ ಈ ಎರಡು ಪಂಚಾಯತ್‌ಗಳ ಅಭಿವೃದ್ಧಿ ಕನಸುಗಳಿಗೆ ರೆಕ್ಕೆ ಮೂಡಲಿದೆ. ಅತ್ತನಾಡಿ ಪರಿಶಿಷ್ಟ ಪಂಗಡದವರ ಕೇಂದ್ರದ ಬಳವಂತಡ್ಕ 10ನೇ ವಾರ್ಡ್, ಎಡಪರಂಬ್ 13ನೇ ವಾರ್ಡ್, 11ನೇ ವಾರ್ಡ್‌ಗಳನ್ನು ಸಂಪರ್ಕಿಸುವ ಅತ್ತನಾಡಿ- ಅರ್ಲುಂಡ ರಸ್ತೆ ಮಲೆನಾಡು ಹೆದ್ದಾರಿಯನ್ನು ದೇಲಂಪಾಡಿ ಪಂಚಾಯತ್‌ಗೆ ಜೋಡಿಸುವ ಇನ್ನೊಂದು ರಸ್ತೆಯಾಗಿದೆ. ಈ ರಸ್ತೆಗಳ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಯಿತು.