ಕೈಕಂಬ: ಹೆದ್ದಾರಿ ಬದಿಯಲ್ಲಿ ವಿದ್ಯುತ್ ಕೇಬಲ್ ಅಳವಡಿಸಲು ತೋಡಿದ ಹೊಂಡದಿಂದ ಅಪಾಯ

ಉಪ್ಪಳ: ಕೈಕಂಬ ಪೇಟೆಯ ಹೆದ್ದಾರಿ ಬದಿಯಲ್ಲಿ ವಿದ್ಯುತ್ ಕೇಬಲ್ ಅಳವಡಿಸಲು ತೋಡಿದ ಹೊಂಡ ಸಾರ್ವಜನಿಕರನ್ನು ಆತಂಕಕ್ಕೀಡುಮಾಡಿದೆ. ಈ ಪ್ರದೇಶದಲ್ಲಿ ದಿನನಿತ್ಯ ನೂರಾರು ಜನರ ಸಂಚಾರವಿದ್ದು ರಾತ್ರಿ ಹೊತ್ತಲ್ಲಿ ನಿಯಂತ್ರಣ ತಪ್ಪಿ ಹೊಂಡಕ್ಕೆ ಬಿದ್ದು ಅನಾಹುತ ಸಂಭವಿಸಬಹುದಾಗಿದೆ. ಒಂದು ತಿಂಗಳ ಹಿಂದೆ ಹೊಂಡ ತೋಡಲಾ ಗಿದೆ. ವಿದ್ಯುತ್ ಕೇಬಲ್ ಅಳವಡಿಸಲಾದರೂ ಹೊಂಡ ಮುಚ್ಚದೆ ಬಿಟ್ಟಿರುವುದು ಅಧಿಕೃತರ ನಿರ್ಲಕ್ಷ÷್ಯವೆಂದು ಸಾರ್ವಜನಿಕರು ಆರೋಪಿಸಿದ್ದಾರೆ. ಹೊಂಡದಿAದ ಈ ಪರಿಸರದ ವ್ಯಾಪಾರ ಸಂಸ್ಥೆಗಳಿಗೆ ತೆರಳಲು ಕೂಡಾ ಸಮಸ್ಯೆಯÁಗಿರುವುದಾಗಿಯೂ ದೂರಲಾಗಿದೆ. ಕಳೆದ ಎರಡು ದಿನಗಳಿಂದ ಮಳೆ ಆರಂಭಗೆÆAಡಿದ್ದು, ಹೊಂಡದಲ್ಲಿ ನೀರು ತುಂಬಿಕೊAಡಲ್ಲಿ ಭಾರೀ ಅಪಾಯಕ್ಕೆ ಕಾರಣವಾಗಬಹುದಾಗಿದೆ. ಕೂಡಲೇ ಹೊಂಡವನ್ನು ಮುಚ್ಚಿ ಸಂಭವಿಸಬಹುದಾದ ಅಪಾಯವನ್ನು ತಪ್ಪಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

You cannot copy contents of this page