ಕುಂಬಳೆ: ಕುಟುಂಬ ಮಸೀ ದಿಯ ಕಾರ್ಯಕ್ರಮಕ್ಕೆ ತೆರಳಿದ ಸಂದರ್ಭದಲ್ಲಿ ಮನೆಗೆ ಕಳ್ಳರು ನುಗ್ಗಿ ಹಣ ಹಾಗೂ ಚೆಕ್ ಲೀಫ್ ಕಳವುಗೈದ ಘಟನೆ ನಡೆದಿದೆ.
ಪೆರ್ಮುದೆ ನಿವಾಸಿಯೂ ಗಲ್ಫ್ ಉದ್ಯೋಗಿಯಾದ ರಫೀಕ್ ಎಂಬವರ ಅರಫಾ ಮಂಜಿಲ್ಗೆ ನುಗ್ಗಿದ ಕಳ್ಳರು ಕಪಾಟಿನಲ್ಲಿದ್ದ ೩೦ ಸಾವಿರ ರೂಪಾಯಿ ಹಾಗೂ ಬ್ಯಾಂಕ್ನ ಚೆಕ್ ಲೀಫ್ ಕಳವುಗೈದಿದ್ದಾರೆ. ಈಬಗ್ಗೆ ರಫೀಕ್ರ ಪತ್ನಿ ಶಮ್ನ ಕೆ.ಎ ನೀಡಿದ ದೂರಿನಂತೆ ಕುಂಬಳೆ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಶಮ್ನ ಹಾಗೂ ಮಕ್ಕಳು ಈ ತಿಂಗಳ ೮ರಂದು ಪೆರ್ಮುದೆಯ ಮಸೀದಿಯಲ್ಲಿ ನಡೆದ ನಬಿದಿನ ಕಾರ್ಯಕ್ರಮಕ್ಕೆ ತೆರಳಿದ್ದರು. ಬಳಿಕ ಅಂದು ರಾತ್ರಿ ಅವರು ಮಸೀದಿ ಬಳಿಯ ಸಹೋ ದರಿಯ ಮನೆಯಲ್ಲಿ ತಂಗಿ ನಿನ್ನೆ ಬೆಳಿಗ್ಗೆ ಮನೆಗೆ ಮರಳಿದ್ದಾರೆ. ಈ ವೇಳೆ ಮನೆಯ ಮುಂಭಾಗದ ಬಾಗಿಲು ಮುರಿದಿರುವುದು ಕಂಡು ಬಂದಿದೆ. ಮನೆಯೊಳಗೆ ಪ್ರವೇಶಿಸಿ ನೋಡಿದಾಗ ಹಣ ಹಾಗೂ ಚೆಕ್ ಲೀಫ್ ಕಳವಿಗೀಡಾಗಿರುವುದು ಅರಿವಿಗೆ ಬಂದಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.