ಕುಂಬಳೆ: ಭಾರತೀಯ ಮಜ್ದೂರ್ ಸಂಘ ಕುಂಬಳೆ ಪಂಚಾಯತ್ ಸಮಿತಿ ಆಶ್ರಯದಲ್ಲಿ ಕೇರಳ ಸರಕಾರದ ಕಾರ್ಮಿಕ ವಿರೋಧಿ ನೀತಿಗೆದುರಾಗಿ ಕಾಲ್ನಡೆ ಜಾಥಾ ಹಮ್ಮಿಕೊಳ್ಳಲಾಯಿತು. ಬಂಬ್ರಾಣ ಚೂರಿತ್ತಡ್ಕದಿಂದ ಆರಂಭಗೊಡ ಜಾಥಾವನ್ನು ಬಿಎಂಎಸ್ ಜಿಲ್ಲಾ ಜೊತೆ ಕಾರ್ಯದರ್ಶಿ ಹರೀಶ್ ಕುದ್ರೆಪ್ಪಾಡಿ ಉದ್ಘಾಟಿಸಿದರು. ನಂತರ ಕುಂಬಳೆಯಲ್ಲಿ ನಡೆದ ಸಮಾರೋಪ ಸಮಾರಂಭವನ್ನು ಜಿಲ್ಲಾ ಜೊತೆ ಕಾರ್ಯದರ್ಶಿ ದಿನೇಶ್ ಬಂಬ್ರಾಣ ಉದ್ಘಾಟಿಸಿದರು. ಜಾಥಾ ಕ್ಯಾಪ್ಟನ್ ಗಣೇಶ್ ಮುಳಿಗದ್ದೆ ನೇತೃತ್ವ ನೀಡಿದರು. ಜಿಲ್ಲಾ ಜೊತೆ ಕಾರ್ಯದರ್ಶಿ ಯಶವಂತಿ ಬೆಜ್ಜ, ವಲಯ ಪದಾಧಿಕಾರಿಗಳಾದ ಐತ್ತಪ್ಪ ನಾರಾಯಣಮಂಗಲ, ಶಿವಾನಂದ ರಾವ್, ರವಿ ಕುಂಬಳೆ, ದಿವಾಕರ ಬಂಬ್ರಾಣ, ಲೋಕೇಶ್ ಬಾಡೂರು ಭಾಗವಹಿಸಿದರು.







