ಮಂಜೇಶ್ವರ: ಬಿ.ಎಂ.ಎಸ್ ಮಿಂಜ ಪಂಚಾಯತ್ ಸಮಿತಿ ಆಶ್ರಯದಲ್ಲಿ ಕೇರಳ ಸರಕಾರದ ಕಾರ್ಮಿಕ ವಿರೋಧಿ, ಜನ ವಿರೋಧಿ ನೀತಿಗೆದುರಾಗಿ ಕಾಲ್ನಡೆ ಜಾಥಾ ಹಮ್ಮಿಕೊಳ್ಳಲಾಯಿತು. ಮೊರತ್ತಣೆ ಯಿಂದ ಆರಂಭಗೊAಡ ಜಾಥಾ ವನ್ನು ಬಿ.ಎಂ.ಎಸ್ ಜಿಲ್ಲಾ ಕಾರ್ಯದರ್ಶಿ ಬಾಬು ಕೆ.ವಿ. ಉದ್ಘಾ ಟಿಸಿದರು. ಮೀಯಪದವುನಲ್ಲಿ ನಡೆದ ಸಮಾರೋಪ ಸಮಾರಂಭ ವನ್ನು ಜಿಲ್ಲಾ ಜೊತೆ ಕಾರ್ಯದರ್ಶಿ ದಿನೇಶ್ ಬಂಬ್ರಾಣ ಉದ್ಘಾಟಿಸಿದರು. ಜಾಥಾ ಕ್ಯಾಪ್ಟನ್ ರಾಮಚಂದ್ರ ಬಟ್ಟಿಪದವು ನೇತೃತ್ವದಲ್ಲಿ ನಡೆದ ಕಾಲ್ನಡೆ ಜಾಥಾ ದಲ್ಲಿ ಜಿಲ್ಲಾ ಜೊತೆಕಾರ್ಯದರ್ಶಿ ಯಶವಂತಿ ಬೆಜ್ಜ, ವಲಯ ಪದಾಧಿಕಾರಿಗಳಾದ ರವಿ ಎಂ ಕೆ ಕೊಳ್ಯೂರ್, ಜಯಲಕ್ಷಿ ್ಮ ಶೆಟ್ಟಿ ಚಿಗುರುಪಾದೆ, ಶಾಲಿನಿ ಮಿಯಪದವು, ಕೃಷ್ಣ ಬೆಜ್ಜ, ಚಂದ್ರಶೇಖರ ವರ್ಕಾಡಿ, ಮನೋಜ್ ಬಟ್ಟಿಪದವ್, ಭಾಸ್ಕರ ಬಿ.ಎಂ, ಉಮೇಶ್ ಅರಿಂಗುಳ ನೇತೃತ್ವ ವಹಿಸಿದರು.
