ದೇವಸ್ವಂ ಆಡಳಿತವನ್ನು ಭಕ್ತರಿಗೆ ನೀಡಬೇಕೆಂಬ ಬಿಜೆಪಿ ಬೇಡಿಕೆ ನ್ಯಾಯಯುತ- ಸಿ.ಕೆ. ಪದ್ಮನಾಭನ್

ಕುಂಬ್ಡಾಜೆ: ಶಬರಿಮಲೆಯಿಂದ ಕೇಳಿ ಬರುತ್ತಿರುವ ಕೊಳ್ಳೆ ಹಾಗೂ ಅವ್ಯವಹಾರಗಳ ಬಗೆಗಿನ ಸುದ್ಧಿಗಳ ಹಿನ್ನೆಲೆಯಲ್ಲಿ ದೇವಸ್ವಂಬೋರ್ಡನ್ನು ಬರ್ಖಾಸ್ತುಗೊಳಿಸಿ ದೇವಸ್ಥಾನದ ಆಡಳಿತವನ್ನು ಭಕ್ತರಿಗೆ ವಹಿಸಿಕೊಡಬೇ ಕೆಂಬ ಬಿಜೆಪಿಯ ಬೇಡಿಕೆ ನ್ಯಾಯ ಯುತವಾಗಿದೆ ಎಂಬುದಕ್ಕೆ ಪುರಾವೆ ಯಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಸಿ.ಕೆ. ಪದ್ಮನಾಭನ್ ನುಡಿದರು. ಬಿಜೆಪಿ ಕುಂಬ್ಡಾಜೆ ಪಂಚಾಯತ್ ಸಮಿತಿ ಆಯೋಜಿಸಿದ ಕಾರ್ಯಕರ್ತರ ಸಂಗಮ ಹಾಗೂ ಜನ ಪ್ರತಿನಿಧಿಗಳನ್ನು ಅಭಿನಂದಿಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಶಬರಿಮಲೆಯ ದ್ವಾರಪಾಲಕ ಶಿಲ್ಪಗಳ ಚಿನ್ನದ ಕವಚಗಳು ಕಳವು ಹೋಗಿರುವುದು ಭಕ್ತರಿಗೆ ನೋವುಂಟು ಮಾಡಿದೆ. ಶಬರಿಮಲೆ ಕೇವಲ ಒಂದು ಕ್ಷೇತ್ರವಲ್ಲ. ಈ ರೀತಿಯಲ್ಲಿನ ಹಿಂದೂ ಕ್ಷೇತ್ರ ಹಾಗೂ ಅಲ್ಲಿನ ಆಚಾರ ಅನು ಷ್ಠಾನಗಳು ಬೇರೆಲ್ಲೂ ಕಂಡು ಬರುವುದಿಲ್ಲ. ಇದನ್ನು ಲೂಟಿಹೊಡೆಯಲು, ನಾಶಪಡಿಸಲು ಕೇರಳವನ್ನು ಅದಲಿಬದಲಿಯಾಗಿ ಆಡಳಿತ ನಡೆಸಿದ ಎಡ-ಬಲ ಒಕ್ಕೂಟಗಳು ಕೈಜೋಡಿ ಸಿವೆ. ಪಿಣರಾಯಿ ವಿಜಯನ್‌ರಿಗೆ ಮತದಾನ ಮಾಡಿದ ಪಕ್ಷೇತರರು ಮಾತ್ರವಲ್ಲದೆ, ಸಿಪಿಎಂ ಕಾರ್ಯಕರ್ತರು ಕೂಡಾ ಈ ಆಡಳಿತದಿಂದ ಸಂಕಷ್ಟ ಗೊಂಡಿರುವುದಾಗಿ ಸಿ.ಕೆ. ಪದ್ಮನಾಭನ್ ದೂರಿದರು. ದೇವಸ್ವಂ ಸಚಿವ ರಾಜೀ ನಾಮೆ ನೀಡಬೇಕು, ದೇವಸ್ವಂ ಬೋ ರ್ಡನ್ನು ಬರ್ಖಾಸ್ತುಗೊಳಿಸಿ ಭಕ್ತರಿಗೆ ಆಡಳಿತ ಹಸ್ತಾಂತರಿಸಬೇಕು, ಕೇಂದ್ರ ಏಜೆನ್ಸಿಗಳಿಂದ ಈ ಬಗ್ಗೆ ತನಿಖೆ ನಡೆಸ ಬೇಕು ಎಂಬಿತ್ಯಾದಿ ಬೇಡಿಕೆಗಳೊಂದಿಗೆ ಬಿಜೆಪಿಯ ನೇತೃತ್ವದಲ್ಲಿ ರಾಜ್ಯವ್ಯಾಪಕ ವಾಗಿ ಪ್ರತಿಭಟನೆ ಮುಂದುವರಿಯಲಿದೆ ಎಂದು ಸಿ.ಕೆ. ಪದ್ಮನಾಭನ್ ನುಡಿದರು.

ತ್ರಿಸ್ತರ ಪಂಚಾಯತ್ ಜನಪ್ರತಿನಿಧಿ ಗಳನ್ನು ಈ ವೇಳೆ ಅಭಿನಂದಿಸಲಾ ಯಿತು. ಎಂ. ಸಂಜೀವ ಶೆಟ್ಟಿ ಮೊಟ್ಟೆ ಕುಂಜ, ಶೈಲಜಾ ಭಟ್, ನಳಿನಿಕೃಷ್ಣ, ಯಶೋಧ ಎನ್, ಹರೀಶ್ ಗೋಸಾಡ, ಕೃಷ್ಣ ಶರ್ಮ, ಸುನಿತ ಜೆ. ರೈ, ಮೀನಾಕ್ಷಿ ಎಸ್, ಸಿಡಿಎಸ್ ಚೆಯರ್ ಪರ್ಸನ್ ರೋಶಿನಿ ಜನಾರ್ದನನ್‌ರನ್ನು ಅಭಿ ನಂದಿಸಲಾಯಿತು. ಬಿಜೆಪಿ ಮಂಗಳೂರು ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮುಖ್ಯ ಅತಿಥಿಯಾಗಿದ್ದರು. ಅವರು ಮಾತನಾಡಿ, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಆಯುಷ್ಮಾನ್ ಭಾರತ್ ಯೋಜನೆಯನ್ನು ಕೇರಳದಲ್ಲಿ ಅನುಷ್ಠಾನಗೊಳಿಸದೆ ಬಡ ಜನತೆಗೆ ಸರಕಾರ ವಂಚಿಸಿದೆ. ಕೇಂದ್ರ ಸರಕಾರದ ಅನುದಾನದಲ್ಲಿ ನಿರ್ಮಿಸಿದ ರಸ್ತೆ, ಮನೆಮನೆ ನೀರಿನ ಸಂಪರ್ಕವನ್ನು ತನ್ನ ಯೋಜನೆಯನ್ನು ಬಿಂಬಿಸಲು ಹೊರಟಿರುವುದು ನಾಚಿಕೆಗೇಡು ಎಂದರು. ಪಂಚಾಯತ್ ಸಮಿತಿ ಅಧ್ಯಕ್ಷ ಶಶಿಧರ ತೆಕ್ಕೆಮೂಲೆ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧ್ಯಕ್ಷೆ ಅಶ್ವಿನಿ ಎಂ.ಎಲ್, ರಾಷ್ಟ್ರೀಯ ಸಮಿತಿ ಸದಸ್ಯ ಎಂ. ಸಂಜೀವ ಶೆಟ್ಟಿ ಮೊಟ್ಟೆಕುಂಜ, ಬದಿಯಡ್ಕ ಮಂಡಲ ಅಧ್ಯಕ್ಷ ಗೋಪಾಲಕೃಷ್ಣ ಮುಂಡೋಳು ಮೂಲೆ, ರಾಜ್ಯ ಸಮಿತಿ ಸದಸ್ಯ ರವೀಶ ತಂತ್ರಿ ಕುಂಟಾರು, ಕಲ್ಲಿಕೋಟೆ ವಲಯ ಪ್ರಧಾನ ಕಾರ್ಯದರ್ಶಿ ಸುಧಾಮ ಗೋಸಾಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಪಿ.ಆರ್, ಬದಿಯಡ್ಕ ಮಂಡಲ ಕಾರ್ಯದರ್ಶಿ ರವೀಂದ್ರ ರೈ ಗೋಸಾಡ ಪಾಲ್ಗೊಂಡಿದ್ದರು. ಪಂ. ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರಮೋದ್ ಭಂಡಾರಿ ಸ್ವಾಗತಿಸಿ, ಉಪಾಧ್ಯಕ್ಷ ಜಯಪ್ರಕಾಶ್ ಶೆಟ್ಟಿ ವಂದಿಸಿದರು. ಶರಣ್ಯ ಮೈಲ್ತೊಟ್ಟಿ ವಂದೇ ಮಾತರಂ ಹಾಡಿದರು.

RELATED NEWS

You cannot copy contents of this page