ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವ: ಹೈಯರ್ ಸೆಕೆಂಡರಿ ವಿಭಾಗದಲ್ಲಿ ಧರ್ಮತ್ತಡ್ಕ ಪ್ರಥಮ, ಪೈವಳಿಕೆನಗರ ದ್ವಿತೀಯ

ಉಪ್ಪಳ: ಪೈವಳಿಕೆ ನಗರ ಶಾಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ನಡೆದ ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವ ನಿನ್ನೆ ಸಂಜೆ ಸಮಾರೋಪಗೊಂಡಿತು. ಹೈಯರ್ ಸೆಕಂಡರಿ ಜನರಲ್ ವಿಭಾಗದಲ್ಲಿ ಎಸ್.ಡಿ.ಪಿ.ಎಚ್.ಎಸ್ ಧರ್ಮತ್ತಡ್ಕ 256 ಅಂಕಗಳೊಂದಿಗೆ ಪ್ರಥಮ ಹಾಗೂ 238 ಅಂಕಗಳೊಂದಿಗೆ ಜಿ.ಎಚ್.ಎಸ್.ಎಸ್ ಪೈವಳಿಕೆ ನಗರ ದ್ವಿತೀಯ ಸ್ಥಾನ ಪಡೆದು ಕೊಂಡಿದೆ. ಹೈಸ್ಕೂಲ್ ಜನರಲ್‌ನಲ್ಲಿ 250 ಅಂಕ ಪಡೆದು ಎಸ್.ಡಿ.ಪಿ. ಎಚ್.ಎಸ್ ಧರ್ಮತ್ತಡ್ಕ ಪ್ರಥಮ, 204 ಅಂಕದೊಂದಿಗೆ ಎಸ್.ಎ.ಟಿ.ಎಚ್.ಎಸ್ ಮಂಜೇಶ್ವರ ದ್ವಿತೀಯ, ಯು.ಪಿ ಜನರಲ್‌ನಲ್ಲಿ ಡಿ.ಬಿ.ಎ.ಯು.ಪಿ.ಎಸ್ ಕಯ್ಯಾರ್ 80 ಅಂಕದೊಂದಿಗೆ ಪ್ರಥಮ, ಎಸ್.ಎಸ್.ಬಿ.ಎ.ಯು.ಪಿ.ಎಸ್ ಐಲ 78 ಅಂಕ ಪಡೆದು ದ್ವಿತೀಯ, ಎಲ್.ಪಿ ಜನರಲ್ ನಲ್ಲಿ ಡಿ.ಬಿ.ಎ.ಯು.ಪಿ.ಎಸ್ ಕಯ್ಯಾರ್ , ಎಸ್.ವಿ.ಎ.ಎಲ್.ಪಿ.ಎಸ್ ಬೆರಿಪದವು, ಎಸ್.ಎಸ್.ಬಿ.ಎ. ಯು.ಪಿ.ಎಸ್ ಐಲ, ಎ.ಎಲ್.ಪಿ.ಎಸ್ ಇಚ್ಲಂಗೋಡು ಇಸ್ಲಾಮಿಯಾ, ಎಸ್.ಎ.ಟಿ. ಎಲ್.ಪಿ.ಎಸ್ ಮಂಜೇಶ್ವರ, ಹೆದ್ದಾರಿ ಎ.ಯು.ಪಿ.ಎಸ್ ಬಾಯಾರ್, ಎಸ್.ಆರ್.ಎ.ಯು.ಪಿ ಎಸ್ ಕುಬಣೂರು, ಜಿ.ಎಲ್.ಪಿ.ಎಸ್ ವಾಮಂಜೂರು ತಲಾ 65 ಅಂಕದೊಂದಿಗೆ ಪ್ರಥಮ ಹಾಗೂ ಎಸ್.ಆರ್.ಎ.ಎಲ್.ಪಿ.ಎಸ್ ಕಯ್ಯಾರ್, ಮಣವಾಟಿ ಬೀವಿ ಇ.ಎಮ್.ಎಸ್ ಧರ್ಮನಗರ, ವಿ.ವಿ.ಎ.ಎಲ್.ಪಿ.ಎಸ್ ತೊಟ್ಟೆತ್ತೋಡಿ, ಎ.ಜೆ.ಐ ಎ.ಯು.ಪಿಎಸ್ ಉಪ್ಪಳ, ಜಿ.ಎಲ್.ಪಿ.ಎಸ್ ತಲೇಕಳ, ಎಸ್.ಎಸ್.ಎ.ಎಲ್.ಪಿ.ಎಸ್ ಕನಿಯಾಲ, ಜಿ.ಡಬ್ಲ್ಯು.ಎಲ್.ಪಿ.ಎಸ್ ಮಂಜೇಶ್ವರ, ಸಂತ ಜೋಸೆಫ್ ಎ.ಯು.ಪಿ.ಎಸ್ ಕಳಿಯೂರು ತಲಾ 63 ಅಂಕ ಪಡೆದು ದ್ವಿತೀಯ ಸ್ಥಾನ, ಹೈಸ್ಕೂಲ್ ವಿಭಾಗದ ಸಂಸ್ಕöÈತದಲ್ಲಿ ಎಸ್.ವಿ.ವಿ.ಎಚ್.ಎಸ್ ಕೊಡ್ಲಮೊಗರು 88ಅಂಕಗಳೊಂದಿಗೆ ಪ್ರಥಮ, ಎಸ್.ಎ.ಟಿ.ಎಚ್.ಎಸ್ ಮಂಜೇಶ್ವರ 85 ಅಂಕ ದ್ವಿತೀಯ, ಯು.ಪಿ ಸಂಸ್ಕೃತದಲ್ಲಿ ಡಿ.ಬಿ.ಎ.ಯು.ಪಿ.ಎಸ್ ಕಯ್ಯಾರ್ 90 ಅಂಕಳೊಂದಿಗೆ ಪ್ರಥಮ, ಸಂತ ಜೋಸೆಫ್ ಎ.ಯು.ಪಿ.ಎಸ್ ಕಳಿಯೂರು 88 ದ್ವಿತೀಯ, ಎಲ್.ಪಿ ಅರಬಿಕ್‌ನಲ್ಲಿ ಕಯ್ಯಾರ್, ಕಳಿಯೂರು, ಆರಿಕ್ಕಾಡಿ, ಬಾಕ್ರಬೈಲ್, ಇಚ್ಲಂಗೋಡು, ಪೆರ್ಮುದೆ, ಬಜಾಲ್ ಕಾರ್ಲ ಶಾಲೆಗಳಿಗೆ ತಲಾ 45 ಅಂಕಗಳೊಂದಿಗೆ ಪ್ರಥಮ ಹಾಗೂ ಮುಡೂರು ತೋಕೆ, ಮುಳಿಂಜ, ವಾಮಂಜೂರು, ಮಂಜೇಶ್ವರ ತಲಾ 43 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಯು.ಪಿ ಅರಬಿಕ್ ವಿಭಾಗದಲ್ಲಿ ಜಿ.ಎಚ್.ಎಸ್.ಎಸ್ ಪೈವಳಿಕೆ ನಗರ 65 ಅಂಕ ಪ್ರಥಮ, ಜಿ.ಎಚ್.ಎಸ್.ಎಸ್ ಶಿರಿಯ 63 ಅಂಕಗಳೊಂದಿಗೆ ದ್ವಿತೀಯ, ಹೈಸ್ಕೂಲ್ ಅರಬಿಕ್ ವಿಭಾಗ ಜಿ.ಎಚ್.ಎಸ್.ಎಸ್ ಹೇರೂರು ಮೀಪಿರಿ 89 ಅಂಕ ಪ್ರಥಮ ಹಾಗೂ ಜಿ.ಎಚ್.ಎಸ್.ಎಸ್ ಶಿರಿಯ 86 ಅಂಕಗಳೊಂದಿಗೆ ಪಡೇದು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ.

You cannot copy contents of this page