ಕಾಸರಗೋಡು: ಸೇವೆಯ ಹಾಗೂ ಸಮರ್ಪಣೆಯ ಮೆರುಗಿನಲ್ಲಿ ರಾಜ್ಯ ಮುಖ್ಯಮಂತ್ರಿಯ ಈ ವರ್ಷದ ಪೊಲೀಸ್ ಪಡೆ ಕಾಸರಗೋಡು ರೈಲ್ವೇ ಪೊಲೀಸ್ ಸ್ಟೇಶನ್ನ ಇಬ್ಬರು ಅಧಿಕಾರಿಗಳಿಗೆ ಲಭಿಸಿದೆ. ಎಸ್ಎಪಿ ಕ್ಯಾಂಪ್ನಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಎಸ್ಎಚ್ಒ ಎಂ. ರಜಿಕುಮಾರ್, ಸಬ್ ಇನ್ಸ್ಪೆಕ್ಟರ್ ಎಂ.ವಿ. ಪ್ರಕಾಶನ್ ಎಂಬಿವರಿಗೆ ಪೊಲೀಸ್ ಪದಕವನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರದಾನ ಮಾಡಿದರು. ಕೇರಳ ರೈಲ್ವೇಯ ಮೂರು ಮಂದಿಗೆ ಮುಖ್ಯಮಂತ್ರಿಯ ಪೊಲೀಸ್ ಪದಕ ಲಭಿಸಿದೆ. ಅದರಲ್ಲಿ ಇಬ್ಬರು ಕಾಸರಗೋಡು ರೈಲ್ವೇ ಪೊಲೀಸ್ ಠಾಣೆಯ ಅಧಿಕಾರಿಗಳಾಗಿದ್ದಾರೆ. ಠಾಣೆಯಲ್ಲಿ ಕಳೆದ ಮೂರು ವರ್ಷದಿಂದ ಇವರು ಉತ್ತಮ ಚಟುವಟಿಕೆಯನ್ನು ನಡೆಸುತ್ತಿದ್ದಾರೆ. ಹಲವಾರು ಪ್ರಕರಣಗಳನ್ನು ಬಿಡಿಸುವುದರಲ್ಲಿ, ಆರೋಪಿಗಳನ್ನು ಪತ್ತೆಹಚ್ಚಿ ಕಾನೂನಿನ ಮುಂದೆ ನಿಲ್ಲಿಸುವುದರಲ್ಲಿ ಸಾಧನೆ ಮಾಡಿದ್ದರು. ರಜಿ ಕುಮಾರ್ ಕಣ್ಣೂರು ಪೆರಿಂಗೋ ಬಳಿಯ ಕಡಾಕುನ್ನು ನಿವಾಸಿಯಾಗಿದ್ದಾರೆ.
ಪ್ರಕಾಶನ್ ಪಿಲಿಕೋಡ್ ಕಣ್ಣಂಗೈ ನಿವಾಸಿಯಾಗಿದ್ದಾರೆ.೨೦೨೨ರಲ್ಲಿ ಸ್ತುತ್ಯಾರ್ಹವಾದ ಸೇವೆಗೆ ಡಿಜಿಪಿಯ ಬ್ಯಾಡ್ಜ್ ಆಫ್ ಆನರ್ ಗೌರವ ಲಭಿಸಿತ್ತು.







