ಕಾಸರಗೋಡು: ೧೧ ಪ್ರಕರಣಗಳಲ್ಲಿ ಆರೋಪಿಯಾದ ಯುವಕನನ್ನು ಕಾಪಾ ಕಾಯ್ದೆ ಪ್ರಕಾರ ಬಂಧಿಸಲಾಗಿದೆ. ವಲಿಯಪರಂಬ ಪಾರಕ್ಕಡವತ್ ಹೌಸ್‌ನ ಪಿ.ಕೆ. ನಸೀರ್ (೩೮) ಎಂಬಾತನನ್ನು ಕಾಞಂಗಾಡ್ ಡಿವೈಎಸ್‌ಪಿ ಪಿ. ಬಾಲಕೃಷ್ಣನ್ ನಾಯರ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ. ಹೊಸದುರ್ಗ, ನೀಲೇಶ್ವರ. ತಿರೂರು, ಚಂದೇರ ಎಂಬೀ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳವು, ಮದ್ಯ ಮಾರಾಟ, ಹೊಡೆದಾಟ, ವಂಚನೆ, ಮಹಿಳೆಯರ ವಿರುದ್ಧ ಅತಿಕ್ರಮಣ ಸಹಿತ ೧೧ ಪ್ರಕರಣಗಳು ಈತನ ವಿರುದ್ಧ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ಬಿಜೋಯ್‌ರ ಶಿಫಾರಸ್ಸಿನಂತೆ ಜಿಲ್ಲಾಧಿಕಾರಿ ಕೆ. ಇಂಬಶೇಖರ್ ಈತನನ್ನು ಕಾಪಾ ಪ್ರಕಾರ ಬಂಧಿಸುವಂತೆ ಆದೇಶಿಸಿದ್ದರು. ಇದೇ ವೇಳೆ ಬೆಂಗಳೂರಿಗೆ ಪರಾರಿಯಾದ ಆರೋಪಿಯನ್ನು ಪೊಲೀಸರು ಉಪಾಯದಿಂದ ಸೆರೆ ಹಿಡಿದಿದ್ದಾರೆ.