ಹಲವು ಪ್ರಕರಣಗಳ ಆರೋಪಿ ಕಾಪಾ ಪ್ರಕಾರ ಬಂಧನ
ಕಾಸರಗೋಡು: ಹಲವು ಪ್ರಕರಣಗಳ ಆರೋಪಿಯನ್ನು ಕಾಸರಗೋಡು ಪೊಲೀಸ್ ಠಾಣೆಯ ಎಸ್ಐ ಕೆ.ಪಿ. ವಿನೋದ್ ಕುಮಾರ್ ನೇತೃತ್ವದ ತಂಡ ಬಂಧಿಸಿದೆ.
ಅಣಂಗೂರು ಕೊಲ್ಲಂಪಾಡಿ ಹೌಸ್ನ ಶಾನವಾಸ್ ಅಲಿಯಾಸ್ ಶಾನು (೩೬) ಬಂಧಿತ ಆರೋಪಿ. ಈತನನ್ನು ಆತನ ಮನೆಯಿಂದ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತನ ವಿರುದ್ಧ ಕಾಸರಗೋಡು ಮತ್ತು ವಿದ್ಯಾನಗರ ಪೊಲೀಸ್ ಠಾಣೆಗಳಲ್ಲಾಗಿ ಹಲವು ಪ್ರಕರಣಗಳಿವೆ. ಅಪಹರಣ, ಕೊಲೆಯತ್ನ, ಹಲ್ಲೆನಡೆಸಿ ಗಂಭೀರ ಗಾಯಗೊಳಿಸುವಿಕೆ, ಗಾಂಜಾ ಇತ್ಯಾದಿ ಪ್ರಕರಣಗಳಲ್ಲಿ ಈತ ಆರೋಪಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಬಂಧಿತನನ್ನು ಬಳಿಕ ಕಣ್ಣೂರು ಸೆಂಟ್ರಲ್ ಜೈಲಿಗೆ ಸಾಗಿಸಲಾಗಿದೆ.