ಬಂದ್ಯೋಡು: ಮಂಜೇಶ್ವರ ಶಾಸಕರ ಪ್ರಾದೇಶಿಕ ಅಭಿವೃದ್ಧಿ ನಿಧಿಯಿಂದ ೭ ಲಕ್ಷ ರೂ. ವ್ಯಯಿಸಿ ನಿರ್ಮಿಸಿದ ಮಂಗಲ್ಪಾಡಿ ಪಂಚಾಯತ್ನ ಶಿರಿಯ ಶಾಲೆ ರಸ್ತೆ ಉದ್ಘಾಟನೆಯನ್ನು ಶಾಸಕ ಎಕೆಎಂ ಅಶ್ರಫ್ ನಿರ್ವಹಿಸಿದರು. ಮಂಗಲ್ಪಾಡಿ ಪಂ. ಸದಸ್ಯೆ ಬೀಫಾತಿಮಾ ಅಬೂಬಕ್ಕರ್ ಅಧ್ಯಕ್ಷತೆ ವಹಿಸಿದರು. ಮುಸ್ಲಿಂ ಲೀಗ್ ಪಂ. ಅಧ್ಯಕ್ಷ ಶಾಹುಲ್ ಹಮೀದ್ ಬಂದ್ಯೋಡು, ಲತೀಫ್ ಅರಬಿ, ಹನೀಫ್, ಸಹೀದ್ ವಳಯಂ, ಶಾಫಿ, ಶಾಫಿ ಸಅದಿ, ಫಿರೋಸ್ ಓನಂದ, ಅಸೀಸ್, ಅಸೀಸ್ ಎಂ, ರಜಾಕ್, ನಾಸರ್ ಶಿರಿಯ ಮೊದಲಾದವರು ಮಾತನಾಡಿದರು.







