ಭೂತಾನ್‌ನಿಂದ ಕಾರು ಸಾಗಾಟ : ಇ.ಡಿ. ತನಿಖೆ ಆರಂಭ ; ಹಲವರಿಗೆ ನೋಟೀಸ್

ಕೊಚ್ಚಿ: ಭೂತಾನ್‌ನಿಂದ ಕಾರುಗಳನ್ನು ಅನಧಿಕೃತವಾಗಿ ಸಾಗಿಸಿದ ಪ್ರಕರಣಕ್ಕೆ ಸಂಬಂಧಿಸಿ ಎನ್‌ಫೋರ್ಸ್‌ಮೆಂಟ್ ಡೈರಕ್ಟರೇಟ್ ತನಿಖೆ ಆರಂಭಿಸಿದೆ. ರಾಜ್ಯದ 17 ಕಡೆಗಳಲ್ಲಾಗಿ ಕಸ್ಟಮ್ಸ್ ಪ್ರಿವೆಂಟಿವ್ ವಿಭಾಗ ನಡೆಸಿದ ತನಿಖೆಯ ಮುಂದುವರಿಕೆಯಾಗಿ ಇ.ಡಿ ತನಿಖೆ ನಡೆಸಲಿದೆ. ನಕಲಿ ದಾಖಲೆಪತ್ರಗಳನ್ನು ಸಲ್ಲಿಸಿ ಕಾರು ಗಳನ್ನು ಆಮದುಮಾಡಿಕೊಳ್ಳಲಾಗಿದೆ ಎಂದು ಪತ್ತೆಯಾದ ಹಿನ್ನೆಲೆಯಲ್ಲಿ ನಟ ಅಮಿತ್ ಚಕ್ಕಾಲಯ್ಕಕಲ್ ಸಹಿತ ಕೆಲವರಿಗೆ ತನಿಖಾ ತಂಡ ನೋಟೀಸ್ ಜ್ಯಾರಿಗೊಳಿಸಿದೆ. ನಟ ದುಲ್ಕರ್‌ಗೂ ನೋಟೀಸು ನೀಡಲು ನಿರ್ಧರಿಸಿರುವುದಾಗಿ ಹೇಳಲಾಗು ತ್ತಿದೆ. ನಕಲಿ ದಾಖಲೆ ಪತ್ರಗಳನ್ನು ಸಲ್ಲಿಸಿ ಭಾರತಕ್ಕೆ ವಾಹನಗಳನ್ನು ತಲುಪಿಸಿದ ಮಧ್ಯವರ್ತಿಗಳು, ಮಾರಾಟಗಾರರು, ವಾಹನ ಖರೀ ದಿಸಿದವರು ಮೊದಲಾದವರನ್ನು ಕೇಂದ್ರೀಕರಿಸಿ ತನಿಖೆ ನಡೆಯುತ್ತಿದೆ. ಭೂತಾನ್‌ನಿಂದ ಕಾರುಗಳ ಸಾಗಾಟ ಗೈದಿರುವುದರ ಹಿಂದೆ ನಡೆದ ಕಾಳಧನ ವ್ಯವಹಾರಗಳ ಕುರಿತು ಇ.ಡಿ. ತನಿಖೆ ನಡೆಸಲಿದೆ. ಭಾರತ ಸೇನೆ, ವಿವಿಧ ಎಂಬಸಿಗಳ ಹಾಗೂ ವಿದೇಶಾಂಗ ಸಚಿವಾಲಯಗಳ ಹೆಸರಲ್ಲಿ ನಕಲಿ ದಾಖಲೆ ಪತ್ರಗಳನ್ನು ಸೃಷ್ಟಿಸಿ ಸಿನಿಮಾ ನಟರಿಗೆ ಹಾಗೂ ಉದ್ಯಮಿಗಳಿಗೆ ಮಧ್ಯವರ್ತಿಗಳು ಆಡಂಬರ ಕಾರುಗಳನ್ನು ಮಾರಾಟಗೈದಿರುವುದಾಗಿ ಪತ್ತೆಹಚ್ಚಲಾಗಿತ್ತು.

You cannot copy contents of this page