ರಸ್ತೆ ಬದಿ ವಿಶ್ರಾಂತಿ ನಿಲ್ದಾಣ ಯೋಜನೆ: ಮಂಜೇಶ್ವರದ ಸಮಗ್ರ ಅಭಿವೃದ್ಧಿ ಗುರಿ

ಮಂಜೇಶ್ವರ: ಮಂಜೇಶ್ವರ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ನೆರವಾಗಬಹುದಾದ ಬೃಹತ್ ಯೋಜನೆಯೊಂದಕ್ಕೆ ಚಾಲನೆ ನೀಡಲಾಗಿದೆ. ಸುಮಾರು ೩೫ ಕೋಟಿ ರೂ.ಗೂ ಅಧಿಕ ವೆಚ್ಚದಲ್ಲಿ ಕಿಫ್‌ಬಿ ಸಹಾಯದೊಂದಿಗೆ ಕಾರ್ಯ ಗತಗೊಳಿಸುವ ಈ ಯೋಜನೆಗೆ ಇತ್ತೀಚೆಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಚಾಲನೆ ನೀಡಿದರು.  ಸಂಯೋಜಿತ ಚೆಕ್ ಪೋಸ್ಟ್ ಗಾಗಿ ಮೀಸಲಿಟ್ಟ ಮಂಜೇಶ್ವರದ ಸ್ಥಳದಲ್ಲಿ ವಿಶ್ರಾಂತಿ ನಿಲ್ದಾಣದ ಬೃಹತ್ ಯೋಜನೆ ಜ್ಯಾರಿಗೆ ಬರಲಿದೆ. ಹೊಸಂಗಡಿ ಮತ್ತು ವಾಮಂಜೂರು ಚೆಕ್ ಪೋಸ್ಟ್ ನಡುವಿನ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಭೂಮಿಯಲ್ಲಿ ಈ ಯೋಜನೆ ಕಾರ್ಯಗತಗೊಳ್ಳಲಿದೆ.

ಓವರ್‌ಸೀಸ್ ಕೇರಳೈಟ್ಸ್ ಇನ್‌ವೆಸ್ಟ್‌ಮೆಂಟ್ ಮತ್ತು ಹೋಲ್ಡಿಂಗ್ ಲಿಮಿಟೆಡ್ ಕಂಪೆನಿ  ಈ  ಯೋಜನೆ ಯನ್ನು ಆರಂಭಿಸಲಿದೆ. ಇದಕ್ಕಾಗಿ  ಕೇರಳ ಸರಕಾರದ ಕೈವಶವಿದ್ದ ೫ ಎಕ್ರೆ ಭೂಮಿಯನ್ನು ಹಸ್ತಾಂತರಿಸಲಾಗಿದೆ. ರಾಜ್ಯದ ವಿವಿಧ ಕಡೆಗಳ ೩೦ ಸ್ಥಳಗಳಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ವಿಶ್ರಾಂತಿ ನಿಲ್ದಾಣಗಳನ್ನು ನಿರ್ಮಿಸುವ ಯೋಜನೆಯಂತೆ  ಹೊಸಂಗಡಿ ಬಳಿ ಈಗ ಈ ಯೋಜನೆಗೆ ಚಾಲನೆ ನೀಡ ಲಾಗಿದೆ. ಇದರಲ್ಲಿ ರೆಸ್ಟೋರೆಂಟ್‌ಗಳು, ಫುಡ್ ಕೋರ್ಟ್, ಕ್ಲೀನಿಕ್, ಇಂಧನ ನಿಲ್ದಾಣ, ವಾಹನ ನಿರ್ವಹಣಾ ಸೌಲಭ್ಯಗಳು, ಕ್ಯಾರವಾನ್ ಪಾರ್ಕಿಂಗ್, ಉತ್ತಮ ಗುಣಮಟ್ಟದ ಶೌಚಾಲಯ ಬ್ಲೋಕ್‌ಗಳು, ಕೊಠಡಿಗಳು, ಪ್ರಯಾಣಿಕರ ವಿಶ್ರಾಂತಿ ಕೋಣೆ, ಸಮ್ಮೇಳನ-ಸಭೆ ನಡೆಸಬಹುದಾದ ಕೊಠಡಿಗಳು ಒಳಗೊಂಡಿವೆ.  ಜಿಎಸ್‌ಟಿ ಜ್ಯಾರಿಗೆ ಬಂದ ಬಳಿಕ ಹೊಸಂಗಡಿ ಬಳಿ ಕಾರ್ಯನಿರ್ವಹಿಸುತ್ತಿದ್ದ ವಾಣಿಜ್ಯ ತೆರಿಗೆ ಚೆಕ್ ಪೋಸ್ಟ್‌ಗಳು ತೆರವಾಗಿತ್ತು. ಈ ಸ್ಥಳವನ್ನು ಈಗ ಈ ಯೋಜನೆಗಾಗಿ  ಬಳಸಲಾಗಿದೆ.  ಲುಲು ಗ್ರೂಪ್‌ಗೆ ಸೇರಿದ ಸ್ಟಾಲ್‌ಗಳು ಇಲ್ಲಿ ಕಾರ್ಯಾಚರಿಸಲಿದ್ದು ಎರಡು ವರ್ಷದೊಳಗೆ ನಿರ್ಮಾಣ ಪೂರ್ತಿಗೊಳ್ಳುವ ನಿರೀಕ್ಷೆಯಿದೆ. ಊರಾಳುಂಗಲ್ ಕಂಪೆನಿ ಇದರ ಗುತ್ತಿಗೆ ವಹಿಸಿಕೊಂಡಿದೆ.

ಹಿಂದುಳಿದ ಮಂಜೇಶ್ವರ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಈ ಯೋಜನೆಗಾಗಿ ಅನುಮತಿ ನೀಡಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಲೋಕೋಪ ಯೋಗಿ ಸಚಿವ ಮೊಹಮ್ಮದ್ ರಿಯಾಸ್‌ರನ್ನು ಮಂಜೇಶ್ವರದ ಜನತೆಯ ಪರವಾಗಿ ಅಭಿನಂದಿಸುತ್ತಿರುವುದಾಗಿ ಸಿಪಿಎಂ ಮಂಜೇಶ್ವರ ಏರಿಯಾ ಸಮಿತಿ ಕೆ.ಆರ್. ಜಯಾನಂದ ತಿಳಿಸಿದ್ದಾರೆ.

RELATED NEWS

You cannot copy contents of this page