ಮಕ್ಕ: ಸೌದಿಯಲ್ಲಿ ಉಂರ ತೀರ್ಥಾಟಕರು ಸಂಚರಿಸಿದ ಬಸ್ಗೆ ಬೆಂಕಿ ತಗಲಿ ಸಂಭವಿಸಿದ ಅಪಘಾತದಲ್ಲಿ 42 ಮಂದಿ ಮೃತಪಟ್ಟಿದ್ದಾರೆ. ಮೃತರಲ್ಲಿ 20 ಮಹಿಳೆಯರು, 11 ಮಕ್ಕಳು ಸೇರಿದ್ದಾರೆ. ಹೈದರಾಬಾದ್ ನಿವಾಸಿಗಳು ಸಂಚರಿಸಿದ ಬಸ್ ಇದಾಗಿತ್ತೆಂದು ತಿಳಿದುಬಂದಿದೆ. ಬಸ್ ಟ್ಯಾಂಕರ್ಗೆ ಢಿಕ್ಕಿ ಹೊಡೆದ ಹಿನ್ನೆಲೆಯಲ್ಲಿ ಬೆಂಕಿ ಸೃಷ್ಟಿಯಾಗಿದೆ. ಬಸ್ನಲ್ಲಿದ್ದ ಓರ್ವ ಮಾತ್ರ ಅಪಾಯದಿಂದ ಪಾರಾಗಿದ್ದಾರೆನ್ನಲಾಗಿದೆ. 43 ಮಂದಿ ಹೈದರಾಬಾದ್ ನಿವಾಸಿಗಳು ಮಕ್ಕಾ ತೀರ್ಥಾಟನೆ ಪೂರ್ತಿಗೊಳಿಸಿ ಮದೀನಕ್ಕೆ ತೆರಳುತ್ತಿದ್ದ ವೇಳೆ ಇಂದು ಮುಂಜಾನೆ 1.30ರ ವೇಳೆ ದುರ್ಘಟನೆ ಸಂಭವಿಸಿದೆ.







