ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳಿಗಿರುವ ಚುನಾವಣೆ ಅಂಗವಾಗಿ ಜಿಲ್ಲೆಯ ವಿವಿಧ ಸ್ಥಳೀಯಾಡಳಿತ ಸಂಸ್ಥೆಗಳ ವಾರ್ಡ್ಗಳು ಹಾಗೂ ಡಿವಿಶನ್ಗಳಲ್ಲಿ ನಿನ್ನೆ ಸಂಜೆ ವರೆಗೆ 830 ನಾಮಪತ್ರಿಕೆಗಳನ್ನು ಸಲ್ಲಿಸಲಾಗಿದೆ. ನಾಳೆ ವರೆಗೆ ನಾಮಪತ್ರ ಸಲ್ಲಿಸಲು ಸಮ ಯಾವಕಾಶವಿದೆ. ನವಂಬರ್ 22ರಂದು ಸೂಕ್ಷ್ಮ ತಪಾಸಣೆ ನಡೆಯಲಿದೆ. ನವಂಬರ್ 24ರ ವರೆಗೆ ನಾಮಪತ್ರ ಹಿಂತೆಗೆದುಕೊಳ್ಳಬಹುದು.
ಕಾಸರಗೋಡು ಜಿಲ್ಲಾ ಪಂಚಾಯತ್ನ ವಿವಿಧ ಡಿವಿಶನ್ಗಳಿಗೆ ಹೊಸತಾಗಿ ಐದು ನಾಮಪತ್ರಗಳನ್ನು ನಿನ್ನೆ ಸಲ್ಲಿಸಲಾಗಿದೆ. ಜಿಲ್ಲಾ ಪಂಚಾ ಯತ್ ಚುನಾವಣಾ ಅಧಿಕಾರಿಯಾದ ಜಿಲ್ಲಾಧಿಕಾರಿ ಕೆ. ಇಂಭಶೇಖರ್, ಉಪಚುನಾವಣೆ ಅಧಿಕಾರಿ ಎಡಿಎಂ ಅಖಿಲ್ರಿಗೆ ನಾಮಪತ್ರ ಸಲ್ಲಿಸ ಲಾಯಿತು. ಜಿಲ್ಲಾ ಪಂಚಾಯತ್ನ ವಿವಿಧ ಡಿವಿಶನ್ಗಳಿಗಾಗಿ ಇದುವರೆಗೆ 37 ನಾಮಪತ್ರಿಕೆಗಳು ಲಭಿಸಿವೆ. ನೀಲೇಶ್ವರ ಬ್ಲೋಕ್ ಪಂಚಾಯತ್ನಲ್ಲಿ 62 ನಾಮಪತ್ರಿಕೆಗಳನ್ನು, ಪರಪ್ಪ ಬ್ಲೋಕ್ ಪಂಚಾಯತ್ನಲ್ಲಿ 32, ಕಾಞಂಗಾಡ್ ಬ್ಲೋಕ್ ಪಂಚಾಯತ್ನಲ್ಲಿ 32, ಮಂಜೇಶ್ವರ ಬ್ಲೋಕ್ ಪಂಚಾಯತ್ನಲ್ಲಿ 2, ಕಾರಡ್ಕ ಬ್ಲೋಕ್ ಪಂಚಾಯತ್ನಲ್ಲಿ 19, ಕಾಸರಗೋಡು ಬ್ಲೋಕ್ ಪಂಚಾಯತ್ನಲ್ಲಿ 16 ನಾಮ ಪತ್ರಿಕೆಗಳನ್ನು ಸಲ್ಲಿಸಲಾಗಿದೆ. ಕಾಞಂಗಾಡ್ ನಗರಸಭೆಯಲ್ಲಿ 74, ನೀಲೇಶ್ವರ ನಗರಸಭೆಯಲ್ಲಿ 56, ಕಾಸರಗೋಡು ನಗರಸಭೆಯಲ್ಲಿ 21 ನಾಮಪತ್ರಿಕೆಗಳು ಲಭಿಸಿವೆ. ಅಜಾನೂರು ಪಂಚಾಯತ್ನಲ್ಲಿ 17, ಬದಿಯಡ್ಕದಲ್ಲಿ 27, ಬಳಾಲ್ನಲ್ಲಿ 22, ಬೇಡಡ್ಕದಲ್ಲಿ 14, ಬೆಳ್ಳೂರಿನಲ್ಲಿ 18, ಚೆರ್ವತ್ತೂರಿನಲ್ಲಿ 53, ದೇಲಂಪಾಡಿ ಯಲ್ಲಿ 14, ಈಸ್ಟ್ ಎಳೇರಿಯಲ್ಲಿ 1, ಎಣ್ಮಕಜೆಯಲ್ಲಿ 6, ಕಯ್ಯೂರು ಚಿಮೇನಿಯಲ್ಲಿ 67, ಕಾರಡ್ಕದಲ್ಲಿ 4, ಕುಂಬ್ಡಾಜೆಯಲ್ಲಿ 31, ಕುಂಬಳೆಯಲ್ಲಿ 9, ಮಡಿಕೈಯಲ್ಲಿ 1, ಮಂಗಲ್ಪಾಡಿಯಲ್ಲಿ 10, ಮೀಂಜದಲ್ಲಿ 7, ಮುಳಿಯಾರಿನಲ್ಲಿ 18, ಪೈವಳಿಕೆಯಲ್ಲಿ 3, ಪಳ್ಳಿಕ್ಕೆರೆಯಲ್ಲಿ 2, ಪನತ್ತಡಿಯಲ್ಲಿ 13, ಪಿಲಿ ಕ್ಕೋಡ್ನಲ್ಲಿ 36, ಪುಲ್ಲೂರುಪೆರಿಯಾ ದಲ್ಲಿ 50, ಪುತ್ತಿಗೆಯಲ್ಲಿ 25, ಉದುಮದಲ್ಲಿ 12, ವರ್ಕಾಡಿಯಲ್ಲಿ 3, ವೆಸ್ಟ್ ಎಳೇರಿಯಲ್ಲಿ 4 ನಾಮಪತ್ರಗಳು ನಿನ್ನೆ ಸಂಜೆವರೆಗೆ ಸಲ್ಲಿಕೆಯಾಗಿದೆ.







