ಮೀಂಜ: ಪಂಚಾಯತ್ ವ್ಯಾಪ್ತಿಯ ಮೀಯಪದವು ರಸ್ತೆಯ ಮಜಿಬೈಲ್ ಸೇತುವೆ ಸಮೀಪ ತಿರುವಿನಲ್ಲಿ ಕಾಡುಪೊದೆ ಆವರಿಸಿಕೊಂ ಡಿದ್ದು ವಾಹನ ಸವಾರರಲ್ಲಿ ಅಪಘಾತಭೀತಿ ಸೃಷ್ಟಿಯಾಗಿದೆ.
ರಸ್ತೆಯುದ್ದಕ್ಕೂ ಅಲ್ಲಲ್ಲಿ ತಿರುವುಗಳಿದ್ದು ಎರಡೂ ಕಡೆಗಳಲ್ಲಿ ಕಾಡುಪೊದೆಗಳು ತುಂಬಿಕೊಂಡಿದೆ. ಆದರೆ ಸೇತುವೆ ಸಮೀಪದಲ್ಲಿ ದೊಡ್ಡ ತಿರುವು ಇದ್ದು ಪೊದೆಗಳು ಆವರಿಸಿದ ಕಾರಣ ಗಮನಕ್ಕೆ ಬಾರದೆ ಅಪಾಯ ಉಂಟಾಗುವ ಸಾಧ್ಯತೆಯಿದೆಯೆಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ. ಮೀಯಪದವು ಭಾಗದಿಂದ ಹೊಸಂಗಡಿಗೆ ಹಾಗೂ ಹೊಸಂಗಡಿ ಭಾಗದಿಂದ ಮೀಯಪದವಿಗೆ ತೆರಳುವ ವಾಹನಗಳು ಅಪಾಯಕ್ಕೆ ಸಿಲುಕುವ ಸಾಧ್ಯತೆ ಇದೆ. ರಸ್ತೆ ಬದಿಯಲ್ಲಿ ತುಂಬಿಕೊಂಡಿರುವ ಕಾಡು ಪೊದೆಗಳನ್ನು ತೆರವುಗೊಳಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.







