ಮಂಜೇಶ್ವರ: ಕೆಎಸ್ಆರ್ಟಿಸಿ ಬಸ್ನಲ್ಲಿ ಗಾಂಜಾ ಸಹಿತ ಪ್ರಯಾಣಿಸುತ್ತಿದ್ದ ಓರ್ವನನ್ನು ಮಂಜೇಶ್ವರ ಅಬಕಾರಿ ಅಧಿಕಾರಿಗಳು ಬಂಧಿಸಿದ್ದಾರೆ. ಕಲ್ಲಿಕೋಟೆ ತಾಲೂಕಿನ ಪಂದಲಾಯನಿ ವಿಲ್ಲೇಜ್ ಬೀಚ್ರೋಡ್ ಕೊಲಾಂಡಿ ವಡಕ್ಕೇ ಪಾಂಡಿಗಶಾಲ ವಳಪ್ಪ್ ಎಂಬಲ್ಲಿನ ಅಜಿನಾಸ್ ವಿ.ಕೆ. (32) ಎಂಬಾತ ಬಂಧಿತ ವ್ಯಕ್ತಿ. ಈತನ ಕೈಯಿಂದ ೯ಗ್ರಾಂ ಗಾಂಜಾ ವಶಪಡಿಸಲಾಗಿದೆ. ಮಂಜೇಶ್ವರ ಅಬಕಾರಿ ಚೆಕ್ಪೋಸ್ಟ್ನಲ್ಲಿ ಅಬಕಾರಿ ಇನ್ಸ್ಪೆಕ್ಟರ್ ಜಿನು ಜೇಮ್ಸ್ ಬಿ.ಯು. ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ. ಮಂಗಳೂರು ಭಾಗದಿಂದ ಕಾಸರಗೋಡಿಗೆ ಬರುತ್ತಿದ್ದ ಬಸ್ನೊಳಗೆ ತಪಾಸಣೆ ನಡೆಸಿದಾಗ ಗಾಂಜಾ ಪತ್ತೆಯಾಗಿತ್ತು. ಇದರಂತೆ ಆರೋಪಿಯನ್ನು ಬಂಧಿಸಿ ಎನ್ಡಿಪಿಎಸ್ ಪ್ರಕರಣ ದಾಖಲಿಸಲಾಗಿದೆ. ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಸಿವಿಲ್ ಎಕ್ಸೈಸ್ ಆಫೀಸರ್ಗಳಾದ ರತೀಶ್ ಒ.ಪಿ., ಪ್ರಶಾಂತ್ ಕುಮಾರ್ ಎ.ವಿ, ಪ್ರಿವೆಂಟಿವ್ ಆಫೀಸರ್ ಗ್ರೇಡ್ ನೌಶಾದ್ ಕೆ, ಅಸಿಸ್ಟೆಂಟ್ ಎಕ್ಸೈಸ್ ಇನ್ಸ್ಪೆಕ್ಟರ್ (ಗ್ರೇಡ್) ಜನಾರ್ದನನ್ ಕೆ.ಎ. ಎಂಬಿವರಿದ್ದರು.







