ಬಂದಡ್ಕ: ಆಸಿಡ್ ಹೊಟ್ಟೆಗೆ ಸೇರಿ ಮನೆಯೊಳಗೆ ಅಸ್ವಸ್ಥ ಸ್ಥಿತಿಯಲ್ಲಿ ಕಂಡು ಬಂದ ಗೃಹಿಣಿ ಮೃತಪಟ್ಟಿದ್ದಾರೆ. ಕುತ್ತಿಕ್ಕೋಲ್ ವೆಳ್ಳಾಲ ನಿವಾಸಿ ಎ. ಕೃಷ್ಣನ್ ನಾಯರ್‌ರ ಪತ್ನಿ ಕಾರ್ತ್ಯಾಯಿನಿ ಅಮ್ಮ (65) ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮೃತದೇಹದ ಮಹಜರಿಗಾಗಿ ಜನರಲ್ ಆಸ್ಪತ್ರೆಯ ಶವಾಗಾರಕ್ಕೆ ಕೊಂಡೊಯ್ಯಲಾಗಿದೆ. ಬೇಡಗಂ ಪೊಲೀಸರು ಅಸಹಜ ಸಾವಿಗೆ ಕೇಸು ದಾಖಲಿಸಿದ್ದಾರೆ. ಮೃತರು ಮಕ್ಕಳಾದ ಬಿಂದು, ಸೇತು, ವಿನಿತ, ಅಳಿಯಂದಿರಾದ ಕುಂಞಂಬು, ಅನಂತನ್, ಸೊಸೆ ಸುನಿಲ, ಸಹೋದರರಾದ ನಾರಾಯಣನ್ ನಂಬ್ಯಾರ್, ಅಂಬುಞಿ ನಂಬ್ಯಾರ್, ಬಾಲಕೃಷ್ಣನ್ ನಂಬ್ಯಾರ್, ಶ್ರೀಧರನ್ ನಂಬ್ಯಾರ್, ಮಾಧವನ್ ನಂಬ್ಯಾರ್, ಸಹೋದರಿ ಕಮಲಾಕ್ಷಿ ಅಮ್ಮ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.







