ಜಿಲ್ಲಾ ಪಂಚಾಯತ್‌ಗೆ ಸ್ಪರ್ಧಿಸುವ ಎನ್‌ಡಿಎ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ

ಕಾಸರಗೋಡು: ಸ್ಥಳೀಯಾಡಳಿತ ಚುನಾವಣೆಯಲ್ಲಿ ಕಾಸರಗೋಡು ಜಿಲ್ಲಾ ಪಂಚಾಯತ್‌ಗೆ ಸ್ಪರ್ಧಿಸುವ ಎನ್‌ಡಿಎ ಅಭ್ಯರ್ಥಿಗಳು ನಾಮಪತ್ರಿಕೆ ಸಲ್ಲಿಸಿದರು. ಕಲೆಕ್ಟರೇಟ್‌ಗೆ ಮೆರವಣಿಗೆಯೊಂದಿಗೆ ತಲುಪಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.

ಎಂ. ವಿಜಯ ಕುಮಾರ್ ರೈ (ವರ್ಕಾಡಿ), ಮಣಿಕಂಠ ಪಟ್ಲ (ಪುತ್ತಿಗೆ), ರಾಮಪ್ಪ ಕೆ.ಪಿ (ಬದಿಯಡ್ಕ), ಬೇಬಿ ಜಿ. (ದೇಲಂಪಾಡಿ), ಮನುಲಾಲ್ ಎಂ. (ಕುತ್ತಿಕ್ಕೋಲ್), ಧನ್ಯಾ ಎಂ. (ಕಳ್ಳಾರ್), ಟಿ.ಡಿ. ಭರತನ್ (ಕಯ್ಯೂರು), ರಮಣಿ ಕೆ.ಎಸ್. (ಚಿಟ್ಟಾರಿಕಲ್), ಶೀಬಾ ಟಿ. (ಚೆರುವತ್ತೂರು), ಎ. ವೇಲಾಯುಧನ್ (ಮಡಿಕೈ), ಹೇಮಲತ (ಪೆರಿಯ), ಮಾಲತಿ (ಬೇಕಲ), ಸೌಮ್ಯಾ ಎಸ್. (ಉದುಮ), ಶುಭಲತ (ಚೆಂಗಳ), ಸುನಿಲ್ ಪಿ.ಆರ್. (ಸಿವಿಲ್ ಸ್ಟೇಷನ್), ಸುನಿಲ್ ಕುಮಾರ್ ಟಿ.ಸಿ. (ಕುಂಬಳೆ), ಜಯಂತಿ ಶೆಟ್ಟಿ (ಮಂಜೇಶ್ವರ) ಎಂಬಿವರು ಬಿಜೆಪಿ ಅಭ್ಯರ್ಥಿಗಳಾಗಿ ನಾಮಪತ್ರಿಕೆ ಸಲ್ಲಿಸಿದ್ದಾರೆ.

ಬಿಜೆಪಿ ಜಿಲ್ಲಾಧ್ಯಕ್ಷೆ ಅಶ್ವಿನಿ ಎಂ.ಎಲ್, ವಲಯ ಅಧ್ಯಕ್ಷ ಕೆ. ಶ್ರೀಕಾಂತ್, ನೇತಾರರಾದ ವಿ. ರವೀಂದ್ರನ್, ಸತೀಶ್ಚಂದ್ರ ಭಂಡಾರಿ, ಎನ್. ಬಾಬುರಾಜ್, ಸುಕುಮಾರನ್ ಕಾಲಿಕಡವ್, ನಾರಾಯಣ ನಾಯ್ಕ್ ಸಹಿತ ಹಿರಿಯ ನೇತಾರರು ಅಭ್ಯರ್ಥಿಗಳೊಂದಿಗಿದ್ದರು. ಪಿಲಿಕ್ಕೋಡ್ ಡಿವಿಶನ್‌ನಿಂದ ಬಿಡಿಜೆಎಸ್ ಅಭ್ಯರ್ಥಿಯಾಗಿ ಕುಂಞಿಕೃಷ್ಣನ್ ನಾಮಪತ್ರ ಸಲ್ಲಿಸಿದ್ದಾರೆ.

You cannot copy contents of this page