ಬಸ್‌ನಲ್ಲಿ ಗಾಂಜಾ ಸಹಿತ ಯುವಕ ಸೆರೆ

ಮಂಜೇಶ್ವರ:  ಗಾಂಜಾ ಸಹಿತ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿ ಸುತ್ತಿದ್ದ ಯುವಕನನ್ನು ಮಂಜೇಶ್ವರ ಅಬಕಾರಿ ಚೆಕ್‌ಪೋಸ್ಟ್ ಅಧಿಕಾರಿಗಳು ಬಂಧಿಸಿದ್ದಾರೆ. ಕಾಸರಗೋಡು ಕೂಡ್ಲು ವಿಲ್ಲೇಜ್‌ನ ಬಳ್ಳಿಮೊಗರು ನಿವಾಸಿ ಗೌತಮ್ ಕೆ. (20) ಬಂಧಿತ ಯುವಕ ನಾಗಿದ್ದಾನೆ. ಮೊನ್ನೆ ಬೆಳಿಗ್ಗೆ ಮಂಗಳೂರು ಭಾಗದಿಂದ ಕಾಸರಗೋಡಿಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನ್ನು ಮಂಜೇಶ್ವರ ಅಬಕಾರಿ ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ ನಡೆಸಿದಾಗ ಅದರ ಪ್ರಯಾಣಿಕನಾದ ಗೌತಮ್‌ನ ಕೈಯಿಂದ 10 ಗ್ರಾಂ ಗಾಂಜಾ ವಶಪಡಿಸಲಾಗಿದೆ. ಈ ಸಂ ಬಂಧ ಈತನನ್ನು ಬಂಧಿಸಿ ಎನ್‌ಡಿಪಿ ಎಸ್ ಕೇಸು ದಾಖಲಿಸಲಾಗಿದೆ. ಅಬಕಾರಿ ಇನ್‌ಸ್ಪೆಕ್ಟರ್ ಜಿನೋ ಜೇಮ್ಸ್ ನೇತೃತ್ವದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಸಿವಿಲ್‌ಎಕ್ಸೈಸ್ ಆಫೀಸರ್‌ಗಳಾದ ಪ್ರಶಾಂತ್, ರತೀಶ್, ಪ್ರಿವೆಂಟಿವ್ ಆಫೀಸರ್ ಗ್ರೇಡ್ ನೌಶಾದ್ ಕೆ., ಅಸಿಸ್ಟೆಂಟ್ ಎಕ್ಸೈಸ್ ಇನ್‌ಸ್ಪೆಕ್ಟರ್ (ಗ್ರೇಡ್) ಜನಾರ್ದನನ್ ಮೊದಲಾದವರಿದ್ದರು.

You cannot copy contents of this page