ಉಪ್ಪಳ: ಮಂಗಲ್ಪಾಡಿ ಪಂಚಾಯತ್ನಲ್ಲಿ ಮುಸ್ಲಿಂ ಲೀಗ್ ಅಭ್ಯರ್ಥಿಯೊಬ್ಬರು ಅವಿರೋಧವಾಗಿ ಆಯ್ಕೆ ಯಾಗಿದ್ದಾರೆ. ಪಂಚಾಯತ್ನ 24ನೇ ವಾರ್ಡ್ ಮಣಿಮುಂಡ ದಲ್ಲಿ ಲೀಗ್ ಅಭ್ಯರ್ಥಿಯಾಗಿ ನಾಮಪತ್ರಿಕೆ ಸಲ್ಲಿಸಿದ ಸಮೀನ ಅವಿರೋಧವಾಗಿ ಆಯ್ಕೆಯಾ ಗಿದ್ದಾರೆ.
ಈ ವಾರ್ಡ್ನಲ್ಲಿ ಅವರಿಗೆ ಪ್ರತಿಸ್ಪರ್ಧಿಗಳು ಯಾರೂ ಇಲ್ಲದುದರಿಂದ ಸಮೀನರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಕಳೆದ ಚುನಾವಣೆಯಲ್ಲಿ ಮುಸ್ಲಿಂ ಲೀಗ್ ಅಭ್ಯರ್ಥಿ ಪರಾಭವಗೊಂಡಿದ್ದ ಈ ವಾರ್ಡ್ನಲ್ಲಿ ಬಿಜೆಪಿ ಹಾಗೂ ಸಿಪಿಎಂ ಸಮಾನ ಶಕ್ತಿ ಹೊಂ ದಿರುವುದಾಗಿ ಹೇಳಲಾಗುತ್ತಿದೆ.
ಸಮೀನ ಮಂಜೇಶ್ವರ ಬ್ಲೋಕ್ ಪಂಚಾಯತ್ ಅಧ್ಯಕ್ಷೆಯಾಗಿದ್ದರು. ನಾಮಪತ್ರಿಕೆ ಸಲ್ಲಿಸಬೇಕಾದ ಕೊನೆಯ ದಿನವಾದ ನಿನ್ನೆವರೆಗೆ ಸಮೀನ ಹಾಗೂ ಡಮ್ಮಿ ಮಾತ್ರವೇ ನಾಮಪತ್ರಿಕೆ ಸಲ್ಲಿಸಿದ್ದರು.






