ಉಪ್ಪಳ: ತುರ್ತು ಸಂದರ್ಭಗಳಲ್ಲಿ ಕರೆ ಮಾಡಲಿರುವ ಇಆರ್ಎಸ್ಎಸ್ ನಂಬ್ರಕ್ಕೆ ಕರೆ ಮಾಡಿ ಪೊಲೀಸರನ್ನು ಹಾದಿ ತಪ್ಪಿಸಿ ಕರ್ತವ್ಯಕ್ಕೆ ತೊಂದರೆ ನೀಡಿರುವುದಾಗಿ ದೂರಲಾಗಿದೆ. ಮಂಜೇಶ್ವರ ಎಸ್ಐ ಎ.ವಿ. ರಾಧಾಕೃಷ್ಣನ್ರ ದೂರಿನಂತೆ ಉಪ್ಪಳ ನಿವಾಸಿ ಮುನೀರ್ ವಿರುದ್ಧ ಕೇಸು ದಾಖಲಿಸಲಾಗಿದೆ. ನಿನ್ನೆ ಮಧ್ಯಾಹ್ನ ೨ ಗಂಟೆಗೆ ಕೇಸಿಗೆ ಆಸ್ಪದವಾದ ಘಟನೆ ನಡೆದಿದೆ. ಮುನೀರ್ ಫೋನ್ನಿಂದ ಪೊಲೀಸರ ಇಆರ್ಎಸ್ಎಸ್ ನಂಬ್ರಕ್ಕೆ ಕರೆ ಮಾಡಿ ಉಪ್ಪಳ ಕೆಎಸ್ಇಬಿಯ ಮುಂಭಾಗದಲ್ಲಿ ಸಂಚಾರ ತಡೆ ಉಂಟಾಗುವ ರೀತಿಯಲ್ಲಿ ಕಾರನ್ನು ನಿಲ್ಲಿಸಲಾಗಿದೆ ಎಂದು ತಿಳಿಸಿದ್ದನು. ಈ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ತಕ್ಷಣ ಧಾವಿಸಿದರೂ ಕಾರನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಬಳಿಕ ನಡೆಸಿದ ಸಮಗ್ರ ತನಿಖೆಯಲ್ಲಿ ಪೊಲೀಸರನ್ನು ಹಾದಿ ತಪ್ಪಿಸಿರುವುದಾಗಿ ಸ್ಪಷ್ಟಗೊಂಡಿದೆ. ಈ ಹಿನ್ನೆಲೆಯಲ್ಲಿ ಫೋನ್ ಕರೆ ಮಾಡಿದ ವ್ಯಕ್ತಿ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ.







