ಮಾಟಂಗುಳಿ ವಾರ್ಡ್‌ನಲ್ಲಿ ಎಡರಂಗ ಸ್ವತಂತ್ರ ಅಭ್ಯರ್ಥಿಗೆ ಜಯ ಸಾಧ್ಯತೆ- ಎಡಪಕ್ಷ ಪದಾಧಿಕಾರಿಗಳು

ಕುಂಬಳೆ: ಪಂಚಾಯತ್‌ನ 22ನೇ ವಾರ್ಡ್ ಮಾಟಂಗುಳಿಯಲ್ಲಿ  ಎಡರಂಗದ ಸ್ವತಂತ್ರ ಅಭ್ಯರ್ಥಿ ಜಯ ಗಳಿಸಲಿದ್ದಾರೆ ಎಂದು ಎಲ್‌ಡಿಎಫ್  ಚುನಾವಣಾ ಪ್ರಚಾರ ಸಮಿತಿ ಕುಂಬಳೆಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದೆ. ೨೦ ವರ್ಷದ ಹಿಂದೆ ಎಡಪಕ್ಷದ ಪಂಚಾಯತ್ ಸದಸ್ಯ ನಡೆಸಿದ ಅಭಿವೃದ್ಧಿ ಕೆಲಸಗಳಲ್ಲದೆ ಆ ಬಳಿಕ ಈ ವಾರ್ಡ್‌ನಲ್ಲಿ ಏನೂ ಸಂಭವಿಸಿಲ್ಲವೆಂದು ಪದಾಧಿಕಾರಿಗಳು ಆರೋಪಿಸಿದ್ದಾರೆ. ಕಳೆದ ಪಂಚಾ ಯತ್ ಚುನಾವಣೆಯಲ್ಲಿ ಬಿಜೆಪಿ ಕೇವಲ ೮೦ ಮತಗಳನ್ನು ಹೆಚ್ಚಾಗಿ ಗಳಿಸಿ ಎಡರಂಗವನ್ನು ಸೋಲಿಸಿದೆ. ಆ ಸನ್ನಿವೇಶ ಈಗ ಇಲ್ಲ. ಅಲ್ಲದೆ ವಾರ್ಡ್ ವಿಭಜನೆಯಿಂದಾಗಿ ಇತರ ವಾರ್ಡ್‌ಗಳಿಂದ ಎಡಪಕ್ಷ ಬೆಂಬಲಿಗರ ಮತಗಳು ಈ ವಾರ್ಡ್‌ನಲ್ಲಿ ಸೇರಿದೆ. ಈ ಎರಡು ವಿಷಯಗಳು ಎಡರಂಗದ ಜಯ ಸಾಧ್ಯತೆಯನ್ನು ಹೆಚ್ಚಿಸುತ್ತಿದೆ ಎಂದು ಅವರು ತಿಳಿಸಿದರು. ಎಡರಂಗ ಹಾಗೂ ಬಿಜೆಪಿ ಮಧ್ಯೆ ಇಲ್ಲಿ ಸ್ಪರ್ಧೆ ನಡೆಯುತ್ತಿದ್ದು, ಯುಡಿಎಫ್‌ಗೆ ಜಯ ಗಳಿಸುವಂತಹ ಮತಗಳು ಇಲ್ಲಿಲ್ಲವೆಂದು ಅವರು ತಿಳಿಸಿದ್ದಾರೆ. ಈ ಬಗ್ಗೆ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಎಡರಂಗದ ವಾರ್ಡ್ ಸಂಚಾಲಕ ಮುನೀರ್, ಇರ್ಷಾದ್ ಚಾಕೊ, ಉದಯ ಕುಮಾರ್ ಭಾಗವಹಿಸಿದರು.

RELATED NEWS

You cannot copy contents of this page