ಕುಂಬಳೆ: ಕುಂಬಳೆ ಗ್ರಾಮ ಪಂಚಾಯತ್ನಲ್ಲಿ ಐದು ವರ್ಷ ಕಾಲ ಯುಡಿಎಫ್ ಆಡಳಿತದಲ್ಲಿ ಭ್ರಷ್ಟಾಚಾರ ನಡೆದಿದ್ದರೆ ಅದನ್ನು ಪತ್ತೆಹಚ್ಚಿ ಅದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಯಾಕೆ ಸಾಧ್ಯವಾಗಿಲ್ಲವೆಂದು ಮುಸ್ಲಿಂ ಲೀಗ್ನ ಮಂಡಲ ಕಾರ್ಯದರ್ಶಿ ಎ.ಕೆ. ಹಾರಿಸ್ ಪ್ರಶ್ನಿಸಿದ್ದಾರೆ. ನಿನ್ನೆ ಸಂಜೆ ಕುಂಬಳೆಯಲ್ಲಿ ಯುಡಿಎಫ್ನ ಚುನಾವಣಾ ಪ್ರಚಾರ ಸಮಾಪ್ತಿಯಂ ಗವಾಗಿ ನಡೆದ ಕಾರ್ನರ್ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ಪಂಚಾಯತ್ನಲ್ಲಿ ಸಿಪಿಎಂನ ಮೂವರು ಹಾಗೂ ಎಸ್ಡಿಪಿಐಯ ಓರ್ವ ಸದಸ್ಯರಿದ್ದರು. ೫ ವರ್ಷಗಳ ಯುಡಿಎಫ್ ಆಡಳಿತದಲ್ಲಿ ಭ್ರಷ್ಟಾ ಚಾರ ನಡೆದಿದೆ ಎಂದು ಈಗ ಆರೋಪಿಸುವ ಅವರು ಅದನ್ನು ಆ ವೇಳೆ ಯಾಕೆ ತಡೆಯಲಿಲ್ಲ್ಲ ಎಂದು ಎ.ಕೆ.ಹಾರಿಸ್ ಪ್ರಶ್ನಿಸಿದ್ದಾರೆ.
ಪಂಚಾಯತ್ನಲ್ಲಿ ಭ್ರಷ್ಟಾಚಾರ ನಡೆದಿದ್ದರೆ ಪತ್ತೆಹಚ್ಚಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಪಂಚಾಯತ್ ಅಧ್ಯಕ್ಷೆ ಯು.ಪಿ. ತಾಹಿರ ವಿಜಿಲೆನ್ಸ್ ಹಾಗೂ ಸ್ಥಳೀಯಾಡಳಿತ ಇಲಾಖೆ ಸಚಿವರಿಗೆ ಮನವಿ ಸಲ್ಲಿಸಿದ್ದರು.
ಭ್ರಷ್ಟಾಚಾರ ನಡೆದಿದ್ದರೆ ಅವರು ಯಾಕೆ ಸುಮ್ಮನಿ ದ್ದಾರೆಂದು ಹಾರಿಸ್ ಪ್ರಶ್ನಿಸಿದ್ದಾರೆ. ಸಭೆಯಲ್ಲಿ ಮುಸ್ಲಿಂ ಲೀಗ್ ಜಿಲ್ಲಾಧ್ಯ ಕ್ಷ ಮಾಹಿನ್ ಹಾಜಿ, ಯುಡಿಎಫ್ ಜಿಲ್ಲಾ ಪಂಚಾಯತ್ ಅಭ್ಯರ್ಥಿ ಅಸೀಸ್ ಕಳತ್ತೂರು, ಬ್ಲೋಕ್ ಪಂಚಾಯತ್ ಅಶ್ರಫ್ ಕಾರ್ಳೆ, ವಿ.ಪಿ. ಅಬ್ದುಲ್ ಖಾದರ್ ಹಾಜಿ ಮೊದಲಾದವರು ಮಾತನಾಡಿದರು.







