ಬದಿಯಡ್ಕ: ತ್ರಿಸ್ತರ ಪಂಚಾಯತ್ ಚುನಾವಣೆಯ ಬಹಿರಂಗ ಪ್ರಚಾರ ನಿನ್ನೆ ಸಂಜೆ 6 ಗಂಟೆಗೆ ಕೊನೆಗೊಂ ಡಿತು. ನಾಳೆ ಮತದಾನ ನಡೆಯಲಿದೆ. ಬದಿಯಡ್ಕ ಪಂ. ವ್ಯಾಪ್ತಿಯಲ್ಲಿ ಒಟ್ಟು 21 ವಾರ್ಡುಗಳಿಗೆ, ಮೂರು ಬ್ಲೋಕ್ ಪಂಚಾಯತ್ , ಜಿಲ್ಲಾ ಪಂಚಾಯತ್‌ಗೆ ಮತದಾನ ನಡೆಯಲಿದೆ.
25 ವರ್ಷಗಳ ಯುಡಿಎಫ್ ಆಡಳಿತಕ್ಕೆ ಕೊನೆಗಾಣಿಸಿ ಬದಿಯಡ್ಕ ಪಂ. ಆಡಳಿತವನ್ನು ಮರಳಿ ಪಡೆಯುವುದಕ್ಕೋಸ್ಕರ ಬಿಜೆಪಿ ಅಭ್ಯರ್ಥಿಗಳು, ನಾಯಕರು ಶತಪ್ರಯತ್ನದಲ್ಲಿದ್ದಾರೆ. ಪಂ.ನ ಅಭಿವೃದ್ಧಿಗಾಗಿ ಮೂಲಭೂತ ಸೌಕರ್ಯಗಳು, ಶೌಚಾಲಯ, ಮನೆ ನಿರ್ಮಾಣ, ಕೃಷಿಗೆ ಅನುದಾನ, ಕ್ರೀಡಾಂಗಣ ನಿರ್ಮಾಣಕ್ಕೆ ಆದ್ಯತೆಯನ್ನು ನೀಡುವುದಾಗಿ ಬಿಜೆಪಿ ಹೇಳಿದೆ. ಬಿಜೆಪಿ ಬದಿಯಡ್ಕ ಪಂ. ಸಮಿತಿ ಕಚೇರಿಯಿಂದ ಅಭ್ಯರ್ಥಿಗಳು, ಕಾರ್ಯಕರ್ತರು ಹಾಗೂ ನಾಯಕರೊಂದಿಗೆ ಪೇಟೆಯಲ್ಲಿ ವಿಜಯಸಂಕಲ್ಪ ಮೆರವಣಿಗೆಯಲ್ಲಿ ಪಾಲ್ಗೊಂಡರು.
ಬದಿಯಡ್ಕ ಪೇಟೆಯಲ್ಲಿ ಎಡರಂಗದ ಅಭ್ಯರ್ಥಿಗಳು ತಮ್ಮ ಕಾರ್ಯಕರ್ತರೊಂದಿಗೆ ಬದಿಯಡ್ಕ ಬಸ್ಸು ತಂಗುದಾಣದ ಪರಿಸರದಿಂದ ಮೆರವಣಿಗೆಯ ಮೂಲಕ ಪೇಟೆಯಲ್ಲಿ ಶಕ್ತಿಪ್ರದರ್ಶನ ತೋರ್ಪಡಿಸಿದರು.







