ಕಾಸರಗೋಡು: ವಿದ್ಯಾನಗರ ನೆಲ್ಕಳ ಕಾಲನಿಯಲ್ಲಿ ಯುವಕನೋ ರ್ವ ಬೆಡ್‌ರೂಂನಲ್ಲಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿ ದ್ದಾನೆ. ದಿವಂಗತರಾದ ಚಂದ್ರ-ಸುಶೀಲ ದಂಪತಿ ಪುತ್ರ ಅಜಯನ್ (28) ಮೃತಪಟ್ಟ ವ್ಯಕ್ತಿ. ಲೈಟ್ ಆಂಡ್ ಸೌಂಡ್ ಕಾರ್ಮಿಕನಾದ ಅಜಯನ್ ಮನೆಯಲ್ಲಿ ಒಬ್ಬರೇ ವಾಸಿಸುತ್ತಿದ್ದರು. ನಿನ್ನೆ ಬೆಳಿಗ್ಗೆ ಮನೆಯ ಬಾಗಿಲು ತೆರೆಯದಿರುವುದು ಗಮನಕ್ಕೆ ಬಂದ ಸಂಬಂಧಿಕರು ಅಲ್ಲಿಗೆ ತೆರಳಿ ನೋಡಿದಾಗ ಬೆಡ್‌ರೂಂನಲ್ಲಿ ನೇಣು ಬಿಗಿದು ಸಾವಿಗೀ ಡಾದ ಸ್ಥಿತಿಯಲ್ಲಿ ಅಜಯನ್ ಪತ್ತೆಯಾಗಿ ದ್ದಾರೆ. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಘಟನೆ ಬಗ್ಗೆ ಕಾಸರಗೋಡು ನಗರಠಾಣೆ ಪೊಲೀ ಸರು ಕೇಸು ದಾಖಲಿಸಿಕೊಂಡಿದ್ದಾರೆ. ಮೃತರು ಸಹೋದರಿಯರಾದ ಅಂಬಿಕ, ಅಜಂತ, ಅಶ್ವತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಓರ್ವ ಸಹೋದರ ಅಶೋಕನ್ ಈ ಹಿಂದೆ ನಿಧನ ಹೊಂದಿದ್ದಾರೆ.







