ಐಟಿಐ ವಿದ್ಯಾರ್ಥಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಕುಂಬಳೆ:  ಕಾಸರಗೋಡಿನ ಐಟಿಐ ವಿದ್ಯಾರ್ಥಿ ಯೋರ್ವ ಬಾಡಿಗೆ ಮನೆಯ ಬೆಡ್‌ರೂಂನಲ್ಲಿ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.  ಬಂ ದ್ಯೋಡು ಅಡ್ಕ ಬೈದಲ ನಿವಾಸಿಯೂ ಪ್ರಸ್ತುತ  ಮಂಗಲ್ಪಾಡಿ ಚೆರುಗೋಳಿಯ ಬಾಡಿಗೆ ಮನೆಯಲ್ಲಿ ವಾಸಿಸುವ ಗಲ್ಫ್ ಉದ್ಯೋ ಗಿ   ಮೊಹಮ್ಮದ್ ಬಾಷಾ ಎಂಬವರ ಪುತ್ರ ಶಿಹಾಬ್ (19)  ಸಾವಿಗೀಡಾದ ವಿದ್ಯಾರ್ಥಿ.  ಈತ ಕಾಸರಗೋಡಿನಲ್ಲಿ ಐಟಿಐ ವಿದ್ಯಾರ್ಥಿಯಾಗಿದ್ದಾನೆ. ನಿನ್ನೆ ರಾತ್ರಿ ಊಟ ಮಾಡಿ ನಿದ್ರಿಸಿದ್ದನು. ಇಂದು ಮುಂಜಾನೆ ತಾಯಿ ಎಬ್ಬಿಸಲು ಹೋದಾಗ ಬಾಗಿಲು ಒಳಗಿನಿಂದ ಚಿಲಕ ಹಾಕಲಾಗಿತ್ತು. ಕರೆದರೂ  ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಕಿಟಿಕಿ ಮೂಲಕ ನೋಡಿದಾಗ ಬೆಡ್‌ರೂಂನ ಕಿಟಿಕಿಯ ಸರಳಿಗೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಶಹಾಬ್ ಪತ್ತೆಯಾಗಿದ್ದಾನೆ. ಬೊಬ್ಬೆ ಕೇಳಿ  ನೆರೆ ಮನೆ ನಿವಾಸಿಗಳು ತಲುಪಿ ಬಾಗಿಲು ತೆರೆದು ಶಿಹಾಬ್‌ನನ್ನು   ಮಂಗಲ್ಪಾಡಿ ಸರಕಾರಿ ಆಸ್ಪತ್ರೆಗೆ ತಲುಪಿಸಿದರೂ ಅಷ್ಟರೊಳಗೆ ಸಾವು ಸಂಭವಿಸಿತ್ತು.  ಘಟನೆ ಬಗ್ಗೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.  ಆತ್ಮಹತ್ಯೆಗೆ ಕಾರಣವೇನೆಂದು ತಿಳಿದುಬಂದಿಲ್ಲ.    ಮೃತನು  ತಂದೆ,  ತಾಯಿ ನಫೀಸ, ಸಹೋದರರಾದ ಅಬ್ದುಲ್ ಶಬೀರ್, ಇಬ್ರಾಹಿಂ ಸಿನಾನ್, ಸಹೋದರಿ ಫಾತಿಮ ಶುಹೈಲ  ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾನೆ.

RELATED NEWS

You cannot copy contents of this page