ಉಪ್ಪಳ: ಉಪ್ಪಳ ಸೋಂಕಾಲ್ ನಲ್ಲಿರುವ ಪತಿ ಮನೆಯಲ್ಲಿ ಯುವತಿಯೋರ್ವೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ ಯಾಗಿದ್ದಾರೆ. ಕೊಡಂಗೆ ರಸ್ತೆಯ ಮೊಯ್ದೀನ್ ಸವಾದ್‌ರ ಪತ್ನಿ ಫಾತಿಮತ್ ನಸ್‌ಬೀನ (25) ಮೃತಪಟ್ಟ ಯುವತಿ. ನಿನ್ನೆ ಸಂಜೆ ಮನೆಯ ಬೆಡ್‌ರೂಂನ ಕಿಟಿಕಿ ಸರಳಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಯುವತಿಯನ್ನು ಕೂಡಲೇ ಮಂಗಳೂರಿನ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸ ಲಾಗಲಿಲ್ಲ. ಘಟನೆ ಬಗ್ಗೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಆತ್ಮಹತ್ಯೆಗೈಯ್ಯಲು ಕಾರಣವೇನೆಂದು ತಿಳಿದು ಬಂದಿಲ್ಲ. ಯಾವುದೋ ಮನೋವ್ಯಥೆಯಿಂದ ಯುವತಿ ನೇಣು ಬಿಗಿದು ಸಾವಿಗೀಡಾಗಿರುವುದಾಗಿ ಮಂಜೇಶ್ವರ ಪೊಲೀಸರು ದಾಖಲಿಸಿಕೊಂಡ ಪ್ರಕರಣದಲ್ಲಿ ತಿಳಿಸಲಾಗಿದೆ. ಮೃತರು ಪತಿ, ಮೂರು ತಿಂಗಳ ಪ್ರಾಯದ ಮಗು ಸಹಿತ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.







