ಕಾಸರಗೋಡು: ಶಾಲೆಯ ಅಡುಗೆ ಕಾರ್ಮಿಕೆ ಕೆರೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪಾಣತ್ತೂರು ಪೆರುತ್ತಡಿ ವಲಿಯವೀಟಿಲ್‌ನ ಶಾರದ (71) ಮೃತಪಟ್ಟ ಮಹಿಳೆ. ಇವರು ಪೆರುತ್ತಡಿ ಜಿಎಲ್‌ಪಿ ಶಾಲೆಯ ಅಡುಗೆ ಕಾರ್ಮಿಕೆಯಾಗಿದ್ದರು. ನಿನ್ನೆ ಅಪರಾಹ್ನ 3 ಗಂಟೆ ವೇಳೆ ಮನೆ ಸಮೀಪದ ವ್ಯಕ್ತಿಯೋರ್ವರ ಕೆರೆಯಲ್ಲಿ ಇವರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೃತರು ಪತಿ ನಾರಾಯಣ ಮಾರಾರ್, ಪುತ್ರ ಹರೀಶ್, ಸೊಸೆ ರಜಿತ, ಸಹೋದರ ಉಣ್ಣಿಕೃಷ್ಣ ಮಾರಾರ್, ಸಹೋದರಿ ಸುಭದ್ರ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇನ್ನೋರ್ವ ಸಹೋದರ ಶಿವಶಂಕರ ಮಾರಾರ್ ಈ ಹಿಂದೆ ನಿಧನರಾಗಿದ್ದಾರೆ.







