ನೂತನ ಪಂಚಾಯತ್ ಜನಪ್ರತಿನಿಧಿಗಳಿಗೆ ಎಲ್‌ಡಿಎಫ್‌ನಿಂದ ಸ್ವಾಗತ

ನೀರ್ಚಾಲು: ಸ್ಥಳೀಯಾಡಳಿತ ಚುನಾವಣೆಯಲ್ಲಿ ಬದಿಯಡ್ಕ ಪಂಚಾ ಯತ್‌ನ ನಾಲ್ಕನೇ ವಾರ್ಡ್‌ನಲ್ಲಿ  ಎಡರಂಗದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ ಸಿಪಿಎಂನ ಅನ್ನತ್ ಬೀವಿ,  ಪುತ್ತಿಗೆ ಪಂಚಾಯತ್ ಉರ್ಮಿ ವಾರ್ಡ್‌ನಿಂದ ಗೆಲುವು ಸಾಧಿಸಿದ ಅಬ್ದುಲ್ ಮಜೀದ್ ಎಂ.ಎಚ್., ಮುಂಡಿತ್ತಡ್ಕ ವಾರ್ಡ್‌ನಿಂದ ಗೆಲುವು ಸಾಧಿಸಿದ ಲಲಿತಾ ಸಂತೋಷ್ ಎಂಬಿವರಿಗೆ  ದೇವರಮೆಟ್ಟು ಎಲ್‌ಡಿಎಫ್ ವಾರ್ಡ್ ಕಮಿಟಿ ನೇತೃತ್ವದಲ್ಲಿ ಸ್ವಾಗತ ನೀಡಲಾಯಿತು.  ಚೆನ್ನೆಗುಳಿ ಉನ್ನತಿಯಲ್ಲಿ ನಡೆದ ಸಭೆಯಲ್ಲಿ ವಾರ್ಡ್ ಕಾರ್ಯದರ್ಶಿ ಸುಬ್ಬಣ್ಣ ರೈ ಅಧ್ಯಕ್ಷತೆ ವಹಿಸಿದರು.  ಸೀಸನ್ ಅಬ್ದುಲ್ಲ ಕುಂಞಿ, ಪ್ರಕಾಶ್ ಅಮ್ಮಣ್ಣಾಯ, ಸಂತೋಷ್ ಪಳ್ಳಂ, ಜಗನ್ನಾಥ ಶೆಟ್ಟಿ, ಉದಯಕುಮಾರ್ ಟಿ ತಲ್ಪಣಾಜೆ ಮೊದಲಾದವರು ಮಾತನಾಡಿದರು. ಸುಬೈರ್ ಬಾಪಾಲಿಪೊನ ಸ್ವಾಗತಿಸಿ,  ಬೂತ್ ಸೆಕ್ರೆಟರಿ ಇಸ್‌ಹಾಕ್ ಬಿ.ಎಂ ವಂದಿಸಿದರು.

RELATED NEWS

You cannot copy contents of this page