ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆಯಿಂದ ಶೇಡಿಕಾವು ಶ್ರೀ ಅಯ್ಯಪ್ಪ ದೇವಸ್ಥಾನದಲ್ಲಿ ನೃತ್ಯ ವೈಭವ

ಕುಂಬಳೆ: ಶೇಡಿಕಾವು ಶ್ರೀ ಅಯ್ಯಪ್ಪ ದೇವಸ್ಥಾನದ ಅಯ್ಯಪ್ಪ ದೀಪೋತ್ಸವ ಸಂದರ್ಭದಲ್ಲಿ ಡಾ. ವಾಣಿಶ್ರೀ ನೇತೃತ್ವದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆಯ ಸಾಹಿತ್ಯ ಗಾನ ನೃತ್ಯ ವೈಭವ ಕಾರ್ಯಕ್ರಮ ಜರಗಿತು. ವಿಶ್ವನಾಥ ಪುತ್ತಿಗೆ, ಮುರಳಿ ನೀರ್ಚಾಲ್, ಕೃಪಾಕಿರಣ, ದಿವಾಕರ ಕಾಸರಗೋಡು, ಈಶ್ವರ ಸೂರಂಬೈಲು, ಸುರೇಶ್ ಪೈಕ ಸಮೂಹಗಾನ ನೀಡಿದರು. ಸಮಿತ, ತೇಜಸ್ವಿನಿ, ಹೃತ್ವಿಕ ಸಹಿತ ವಿವಿಧ ಕಲಾವಿದರು ನೃತ್ಯ ಪ್ರದರ್ಶನಗೈದರು. ಹರಿಕಾಂತ್ ಅವರಿಂದ ರಿಂಗ್ ಡ್ಯಾನ್ಸ್, ತನುಷ ಬಲ್ಲಾಳ್‌ರಿಂದ ಯೋಗ ನೃತ್ಯ, ಪ್ರೀತಿಕಾ ಪ್ರಸಾದ್‌ರಿಂದ ರಿಂಗ್ ನೃತ್ಯ ಗಮನ ಸೆಳೆಯಿತು. ನೃತ್ಯ ವಿಧುಷಿ ರೇಖಾ ದಿನೇಶ್ ಅವರ ಶಿಷ್ಯೆಯರಿಂದ ಸಮೂಹ ಯಕ್ಷನೃತ್ಯ ಜರಗಿತು. 

ಅರಿಯಪ್ಪಾಡಿ ಮಾಡ ಶ್ರೀಕೃಷ್ಣ ಬಾಲಗೋಕುಲದ ಕಲಾವಿದರು ಸಾಹಸ ನೃತ್ಯ ಪ್ರದರ್ಶಿಸಿದರು.

ಜಾನಪದ ನೃತ್ಯ, ಸಮೂಹ ಭರತನಾಟ್ಯ, ಭಕ್ತಿನೃತ್ಯ ಮೊದಲಾದ ಕಾರ್ಯಕ್ರಮಗಳು ಜರಗಿತು. ವಿದುಷಿ ರೇಖಾ ದಿನೇಶ್, ಡಾ. ವಾಣಿಶ್ರೀಯವರನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು. ಸಮಿತಿ ಅಧ್ಯಕ್ಷ ರಾಮಚಂದ್ರ, ಕಾರ್ಯದರ್ಶಿಗಳಾದ ಸಂದೀಪ್ ಆರಿಕ್ಕಾಡಿ, ಶಂಕರ ಆಳ್ವ, ಸಂತೋಷ್ ಗುರುಸ್ವಾಮಿ ಉಪಸ್ಥಿತರಿದ್ದರು.

RELATED NEWS

You cannot copy contents of this page