ಬದಿಯಡ್ಕ: ಕೇರಳ ಗ್ರಾಮೀಣ ಬ್ಯಾಂಕ್ ಮೆನೇಜರ್ ಆಗಿದ್ದ ಬದಿಯಡ್ಕ ಚೇರ್ಕೂಡ್ಲುವಿನ ಶಿವರಾಮ ಮಣಿಯಾಣಿ (67) ನಿಧನ ಹೊಂದಿದರು. ಇವರ ಪತ್ನಿ ನಳಿನಾಕ್ಷಿ ಈ ಹಿಂದೆ ನಿಧನ ಹೊಂದಿದ್ದಾರೆ. ಮೃತರು ಮಕ್ಕಳಾದ ಡಾ. ಶೈನಾ ರಾಜೇಶ್, ಡಾ. ಅನುರಾಧ, ಇಂಜಿನಿಯರ್ ಸೂರ್ಯನಾರಾಯಣ, ಅಳಿಯಂದಿರಾದ ರಾಜೇಶ್ ಅಗಲ್ಪಾಡಿ (ನವಜೀವನ ಹೈಯರ್ ಸೆಕೆಂಡರಿ ಶಾಲೆಯ ಅಧ್ಯಾಪಕ), ಅಶ್ವತ್ಥ್ ಆಲಟ್ಟಿ (ಇಂಜಿನಿಯರ್), ಸಹೋದರರಾದ ಕೇಳು ಮಣಿಯಾಣಿ, ಕುಂಞಂಬು, ಸಹೋದರಿಯರಾದ ಶ್ರೀದೇವಿ, ಗೋಪಿ, ಲಕ್ಷ್ಮಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇಬ್ಬರು ಸಹೋದರಿಯರಾದ ಬೆಳ್ತಮ್ಮ, ಸರಸ್ವತಿ ಈ ಹಿಂದೆ ನಿಧನ ಹೊಂದಿದ್ದಾರೆ.







