ಕೊಚ್ಚಿ: ನಟಿಗೆ ದೌರ್ಜನ್ಯಗೈದ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲ ಯದ ತೀರ್ಪಿನ ವಿರುದ್ಧ ಹೈಕೋ ರ್ಟ್‌ನಲ್ಲಿ ಅಪೀಲು ಸಲ್ಲಿಸಲು ರಾಜ್ಯ ಸರಕಾರ ತೀರ್ಮಾನಿಸಿದೆ. ಡಿಜಿಪಿ ಹಾಗೂ ಸ್ಪೆಷಲ್ ಪ್ರಾಸಿಕ್ಯೂಟರ್‌ರ ಶಿಫಾರಸ್ಸನ್ನು ಅಂಗೀಕರಿಸಿ ಸರಕಾರ ಇದಕ್ಕೆ ಅಂಗೀಕಾರ ನೀಡಿದೆ. ೮ನೇ ಆರೋಪಿ ನಟ ದಿಲೀಪ್ ಸಹಿತ 4 ಮಂದಿಯನ್ನು ಆರೋಪಮುಕ್ತಗೊಳಿಸಿದ ಎರ್ನಾಕುಳಂ ಪ್ರಿನ್ಸಿಪಲ್ ಸೆಶನ್ಸ್ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಸರಕಾರ ಅಪೀಲು ಸಲ್ಲಿಸಲಿದೆ. ಸಂತ್ರಸ್ತೆ ಮುಖ್ಯಮಂತ್ರಿಯೊಂದಿಗೆ ನಡೆಸಿದ ಸಮಾಲೋಚನೆಯ ಬೆನ್ನಲ್ಲೇ ಅಪೀಲು ಸಲ್ಲಿಸಲಿರುವ ಕ್ರಮಗಳನ್ನು ತ್ವರಿತಗೊಳಿ ಸಲು ಸರಕಾರ ತೀರ್ಮಾನಿಸಿದೆ. ಪ್ರಕರಣದಲ್ಲಿ ಪಲ್ಸರ್ ಸುನಿ ಸಹಿತ ೬ ಮಂದಿ ಆರೋಪಿಗಳಿಗೆ ೨೦ ವರ್ಷ ಕಠಿಣ ಸಜೆ ವಿಧಿಸಲಾಗಿದೆ. ಗೂಢಾ ಲೋಚನೆ ಆರೋಪ ಸಾಬೀತುಪಡಿಸಲು ಪ್ರೋಸಿಕ್ಯೂಶನ್‌ಗೆ ಸಾಧ್ಯವಾಗಿಲ್ಲ ವೆಂದು ತಿಳಿಸಿ ದಿಲೀಪ್ ಸಹಿತ೪ ಮಂದಿ ಯನ್ನು ವಿಚಾರಣಾ ನ್ಯಾಯಾಲಯ ಖುಲಾಸೆಗೊಳಿಸಿದೆ. ಆದರೆ ಪ್ರಕರಣ ದಲ್ಲಿ ಗೂಢಾಲೋ ಚನೆಗೆ ಸಂಬಂಧಿಸಿ ಸಾಕಷ್ಟು ಪುರಾವೆಗಳು ತಮ್ಮಲ್ಲಿವೆ ಯೆಂದೂ ಮೇಲಿನ ನ್ಯಾಯಾಲಯದಲ್ಲಿ ಇದನ್ನು ಸಲ್ಲಿಸಲು ಸಾಧ್ಯವಾಗಲಿದೆಯೆಂದು ಪ್ರೋಸಿ ಕ್ಯೂಶನ್ ಹಾಗೂ ತನಿಖಾ ತಂಡ ತಿಳಿಸಿದೆ.







