ಕಾಸರಗೋಡು: ಉಳಿಯತ್ತಡ್ಕಕ್ಕೆ ಸಮೀಪದ ಭಗವತೀ ನಗರದ ಚಿತ್ರ ಕುಮಾರಿ ವೈದ್ಯರ್ ವಳಪ್ಪು ಎಂಬವರ ಹೆಂಚು ಹಾಸಿದ ಮನೆಗೆ ನಿನ್ನೆ ರಾತ್ರಿ ಬೆಂಕಿ ತಗಲಿ ಭಾರೀ ನಾಶನಷ್ಟ ಸಂಭವಿಸಿದೆ.
ಮೊಬೈಲ್ ಫೋನ್ ಚಾರ್ಚಿಂಗ್ ನಡೆಸುತ್ತಿದ್ದ ವೇಳೆ ಶಾರ್ಟ್ ಸರ್ಕ್ಯೂಟ್ ಉಂಟಾಗಿದೆ. ಆ ಬಗ್ಗೆ ಮನೆಯವರು ನೀಡಿದ ಮಾಹಿತಿಯಂತೆ ಸೀನಿಯರ್ ಫಯರ್ ಆಂಡ್ ರೆಸ್ಕ್ಯೂ ಆಫೀಸರ್ ವಿ.ಎನ್. ವೇಣುಗೋಪಾಲ್ ನೇತೃತ್ವದ ಕಾಸರಗೋಡು ಅಗ್ನಿಶಾಮಕದಳ ತಕ್ಷಣ ಸ್ಥಳಕ್ಕಾಗಮಿಸಿ ಸತತವಾಗಿ ನಡೆಸಿದ ಕಾರ್ಯಾ ಚರಣೆಯಲ್ಲಿ ಬೆಂಕಿ ನಂದಿಸಿದರು.
ಬೆಂಕಿ ತಗಲಿದ ಕೊಠಡಿ ಯೊಳಗಿದ್ದ ಕಪಾಟು, ಮೇಜು, ಹಾಸಿಗೆ ಮತ್ತಿತರ ಸಾಮಗ್ರಿಗಳು, ಅದರ ಮೇಲ್ಛಾವಣಿ ಪೂರ್ಣವಾಗಿ ಬೆಂಕಿಗಾಹುತಿಯಾಗಿದೆ.
ಮನೆಯ ಇತರ ಕೊಠಡಿಗಳಿಗೆ ಬೆಂಕಿ ತಗಲದೇ ಇರುವುದರಿಂದಾಗಿ ಸಂಭಾವ್ಯ ಭಾರೀ ದೊಡ್ಡ ಅನಾಹುತ ತಪ್ಪಿಹೋಗಿದೆ. ಲಕ್ಷಾಂತರ ರೂ.ಗಳ ತನಕ ನಷ್ಟ ಅಂದಾಜಿಸಲಾಗಿದೆ. ಬೆಂಕಿ ತಗಲಿದ ವೇಳೆ ಮನೆಯಲ್ಲಿ ಚಿತ್ರಕು ಮಾರಿ, ಪುತ್ರ, ಮೊಮ್ಮಗ ಮಾತ್ರವೇ ಇದ್ದರು. ಅಗ್ನಿಶಾಮಕದಳದ ತಂಡದಲ್ಲಿ ಇತರ ಸಿಬ್ಬಂದಿಗಳಾದ ಇ ಪ್ರಸೀದ್, ಕೆ.ಜೆ. ಅಭಯ್ ಸೇನ್, ಜೆ.ಬಿ.ಜಿಜೋ ಮತ್ತು ಎ. ರಾಜೇಂ ದ್ರನ್ ಎಂಬವರು ಒಳಗೊಂಡಿದ್ದರು.







