ಶಬರಿಮಲೆ ಚಿನ್ನ ಕಳವು: ಆರೋಪಿಗೆ ನಿರೀಕ್ಷಣಾ ಜಾಮೀನು ನಕಾರ: ‘ದೇವರನ್ನಾದರೂ ನಿಮಗೆ ಸುಮ್ಮನೆ ಬಿಡಬಾರದೇ’-ಸುಪ್ರೀಂಕೋರ್ಟ್

ನವದೆಹಲಿ: ಶಬರಿಮಲೆ ದೇಗುಲದ ಚಿನ್ನ ಕಳವು ಪ್ರಕರಣದ ಆರೋಪಿಗಳಲ್ಲೋರ್ವನಾದ ತಿರುವಿದಾಂಕೂರು ಮುಜರಾಯಿ ಮಂಡಳಿಯ ಮಾಜಿ ಸದಸ್ಯ ಕೆ.ಪಿ. ಶಂಕರದಾಸ್ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯನ್ನು  ನ್ಯಾಯಮೂರ್ತಿಗಳಾದ ದೀಪಾಂ ಕರ್ ದತ್ತ ಮತ್ತು ಎಸ್.ಸಿ. ಶರ್ಮಾರ ನ್ನೊಳಗೊಂಡ ಸುಪ್ರೀಂಕೋರ್ಟ್‌ನ ದ್ವಿಸದಸ್ಯ ಪೀಠ ವಜಾಗೈದು  ನಿರೀಕ್ಷಣಾ ಜಾಮೀನು ನಿರಾಕರಿಸಿ ತೀರ್ಪು ನೀಡಿದೆ.

ಶಬರಿಮಲೆ ಚಿನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿ ನನ್ನ ಬಗ್ಗೆ ಕೇರಳ ಹೈಕೋರ್ಟ್ ನಡೆಸಿರುವ ಪರಾಮರ್ಶೆಗಳನ್ನು ಅದರ ಕಡತಗಳಿಂದ ಹೊರತುಪಡಿಸಬೇಕೆಂಬ ಶಂಕರ್‌ದಾಸ್ ರ ಬೇಡಿಕೆಯನ್ನೂ ಸುಪ್ರೀಂಕೋರ್ಟ್ ನಿರಾಕರಿಸಿದೆ ಮಾತ್ರವಲ್ಲ ‘ದೇವರನ್ನಾ ದರೂ ನಿಮಗೆ ಸುಮ್ಮಗೆ ಬಿಡಬಾರದೇ’ ಎಂದೂ ಸುಪ್ರೀಂಕೋರ್ಟ್ ಇದೇ ಸಂದರ್ಭದಲ್ಲಿ ಮೌಖಿಕ ಪರಾಮರ್ಶೆ ನಡೆಸಿದೆ.  ತನ್ನ ಬೇಡಿಕೆಯನ್ನು ನ್ಯಾಯಾಲಯ ನಿರಾಕರಿಸಿರುವ ಹಿನ್ನೆಲೆಯಲ್ಲಿ ಶಂಕರ್‌ದಾಸ್ ಬಳಿಕ ತನ್ನ ಅರ್ಜಿಯನ್ನು ಸುಪ್ರೀಂಕೋ ರ್ಟ್‌ನಿಂದ ಹಿಂಪಡೆದುಕೊಂಡರು.

ಶಬರಿಮಲೆ ದೇಗುಲದ ಗರ್ಭಗುಡಿ ದ್ವಾರಪಾಲಕ ಮೂರ್ತಿಗಳ ಕವಚಗಳು ತಾಮ್ರದ್ದಾಗಿದೆಯೆಂಬ ಹೆಸರಲ್ಲಿ ಅದನ್ನು ಚಿನ್ನದ ಲೇಪನಕ್ಕಾಗಿ 2019ರಲ್ಲಿ ಶಬರಿಮಲೆ ದೇವಸ್ವಂ ಮಂಡಳಿ  ಸದಸ್ಯರಾಗಿದ್ದ  ಕೆ.ಪಿ. ಶಂಕರದಾಸ್ ಮತ್ತು  ಎನ್.ವಿಜಯ್ ಕುಮಾರ್ ಅನುಮತಿ ನೀಡಿದ್ದರೆಂದು ತನಿಖಾ ತಂಡ ಹೈಕೋರ್ಟ್‌ಗೆ ಸಲ್ಲ್ಲಿಸಿದ್ದ ತನಿಖಾ ವರದಿಯಲ್ಲಿ ತಿಳಿಸಿತ್ತು. ಆ ವರದಿಯನ್ನು ಪರಿಶೀಲಿಸಿದ ಹೈಕೋರ್ಟ್ ಈ ಇಬ್ಬರನ್ನು ಶಬರಿಮಲೆ ಚಿನ್ನ ಕಳವು ಪ್ರಕರಣದಲ್ಲಿ ಆರೋಪಿಗಳನ್ನಾಗಿ ಸೇರ್ಪಡೆಗೊಳಿಸದೇ ಇರುವುದು ಹಾಗೂ ಅವರನ್ನು ಬಂಧಿಸದೇ ಇರುವುದು ನಿಜಕ್ಕೂ ಅಚ್ಚರಿಯ ವಿಷಯವಾಗಿದೆ ಎಂದು   ತನಿಖಾ ತಂಡವನ್ನು ತೀವ್ರ ತರಾಟೆಗೂ ತೆಗೆದುಕೊಂಡಿತ್ತು. ಹೈಕೋರ್ಟ್‌ನ ಅಂತಹ ಪರಾಮರ್ಶೆಗಳನ್ನು ಹೊರತುಪಡಿಸಬೇಕು ಹಾಗೂ ತನಗೆ ನಿರೀಕ್ಷಣಾ ಜಾಮೀನು  ಮಂಜೂರು ಮಾಡಬೇಕೆಂದು ಕೋರಿ ಶಂಕರದಾಸ್ ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ ವಿನಂತಿಸಿಕೊಂ ಡಿದ್ದರು. ಆ ಬೇಡಿಕೆಗಳನ್ನೆಲ್ಲಾ ಸುಪ್ರೀಂಕೋರ್ಟ್ ನಿರಾಕರಿಸಿದೆ.

ಶಬರಿಮಲೆ ದೇಗುಲದ ಚಿನ್ನ ಕಳವು ಪ್ರಕರಣದ ತನಿಖೆಯ ಕುರಿತಾದ ನಾಲ್ಕನೇ ವರದಿಯನ್ನು ವಿಶೇಷ ತನಿಖೆ ತಂಡ ಇನ್ನೊಂದೆಡೆ ನಿನ್ನೆ ಹೈಕೋರ್ಟ್‌ಗೆ ಸಲ್ಲಿಸಿದೆ. ಮಾತ್ರವಲ್ಲ ಪ್ರಸ್ತುತ ಪ್ರಕರಣದ ತನಿಖೆಯನ್ನು ಜನವರಿ 17ರೊಳಗಾಗಿ ಪೂರ್ತೀಕರಿಸಬೇಕೆಂಬ ನಿಗದಿತ ಅವಧಿಯನ್ನು ಹೈಕೋರ್ಟ್  ಒಂದು ವಾರಕ್ಕೆ ವಿಸ್ತರಿಸಿದೆ.

You cannot copy contents of this page