ಕೇರಳ ವಿಧಾನಸಭೆಗೆ ಎಪ್ರಿಲ್‌ನಲ್ಲಿ ಚುನಾವಣೆ ಸಾಧ್ಯತೆ: ಅವಲೋಕನಕ್ಕಾಗಿ ಕೇಂದ್ರ ಚುನಾವಣಾ ಆಯೋಗ ಮುಂದಿನ ತಿಂಗಳು ರಾಜ್ಯಕ್ಕೆ

ತಿರುವನಂತಪುರ: ವಿಧಾನಸಭಾ ಚುನಾವಣೆಗೆ ಕೇರಳ ತಯಾರಾಗಿದ್ದು ಇದರ ಪೂರ್ವಭಾವಿ ಸಿದ್ಧತೆಗಳ ಬಗ್ಗೆ ಅವಲೋಕನ ನಡೆಸಲು ಕೇಂದ್ರ ಚುನಾ ವಣಾ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ನೇತೃತ್ವದ ತಂಡ ಮುಂದಿನ ತಿಂಗಳು ಕೇರಳಕ್ಕೆ ಆಗಮಿಸಲಿದೆ.

ಕೇರಳ ವಿಧಾನಸಭಗೆ ಚುನಾವಣೆ ನಡೆಯಲಿರುವ ಬಗ್ಗೆ ಕೇಂದ್ರ ಚುನಾವಣಾ ಆಯೋಗ ನಿನ್ನೆ ಸಭೆ ಸೇರಿ  ಚರ್ಚೆ ನಡೆಸಿದೆ. ೨೦೨೧ರಂದು ನಡೆಸಲಾದ ರೀತಿಯಲ್ಲಿ ಈ ಬಾರಿಯೂ ಏಕ ಹಂತ ದಲ್ಲಿ ಚುನಾವಣೆ ನಡೆಸಲು ಆಯೋಗ  ಚಿಂತನೆ ನಡೆಸಿದೆ. ಕಳೆದಬಾರಿ ಎಪ್ರಿಲ್ ೬ರಂದು ಕೇರಳ ವಿಧಾನಸಭೆಯ ಒಟ್ಟು 140 ಕ್ಷೇತ್ರಗಳಿಗ್ಲೆ  ಏಕ ಹಂತದಲ್ಲಿ ಚುನಾವಣೆ ನಡೆದಿತ್ತು. ಮೇ 2ರಂದು ಫಲಿತಾಂಶ ಪ್ರಕಟಗೊಂಡಿತ್ತು. ಅದರಲ್ಲಿ ಎಡರಂಗ 99 ಸ್ಥಾನಗಳಲ್ಲಿ  ಗೆದ್ದು ಪಿಣರಾಯಿ  ವಿಜಯನ್ ನೇತೃತ್ವದ ಎಡರಂಗ ಸರಕಾರ ಸತತ ಎರಡನೇ ಬಾರಿ ಅಧಿಕಾರಕ್ಕೇರಿತ್ತು. ಯುಡಿಎಫ್‌ಗೆ  ಕೇವಲ 41  ಸ್ಥಾನ ಮಾತ್ರವೇ ಲಭಿಸಿತ್ತು. ಬಿಜೆಪಿ ನೇತೃತ್ವದ ಎನ್‌ಡಿಎ ಶೂನ್ಯ ಸಂಪಾದನೆ ಮಾಡಿತ್ತು. 

2021ರ ಹಾಗೆ ಈ ಬಾರಿಯೂ ಎಪ್ರಿಲ್ ತಿಂಗಳಲ್ಲೇ ಏಕ ಹಂತದಲ್ಲಿ ಚುನಾವಣೆ ನಡೆಸಲು ಚುನಾವಣಾ ಆಯೋಗ ಚಿಂತನೆ ನಡೆಸಿದೆ.  ಮೇ ತಿಂಗಳೊಳಗಾಗಿ ಹೊಸ ಸರಕಾರ ಅಧಿಕಾರಕ್ಕೇರಬೇಕಾಗಿರುವ  ಹಿನ್ನೆಲೆಯಲ್ಲಿ  ಅದರ ಮೊದಲೇ ಎಲ್ಲಾ ಚುನಾವಣಾ  ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಆಯೋಗ ತೀರ್ಮಾನಿಸಿದೆ.

 ಕೇರಳದಲ್ಲಿ ನಡೆಸಲಾಗುವ ಚುನಾವಣಾ ಪೂರ್ವಸಿದ್ಧತೆಗಳ ಬಗ್ಗೆ ಮುಂದಿನ ತಿಂಗಳು ಕೇರಳಕ್ಕೆ ಆಗಮಿಸಿ ಅವಲೋಕನೆ ನಡೆಸಿದ ಬಳಿಕ ಚುನಾವಣಾ ದಿನಾಂಕವನ್ನು   ಆಯೋಗ ನಿರ್ಣಯಿಸಲಿದೆ.  ಶಾಂತ ರೀತಿಯಲ್ಲಿ ಚುನಾವಣೆ ನಡೆಸಲು ಅಗತ್ಯದಷ್ಟು ಕೇಂದ್ರ ಪಡೆಯನ್ನು ನಿಯೋಜಿಸಲಾಗುವುದೆಂದು ಆಯೋಗ ತಿಳಿಸಿದೆ.

RELATED NEWS

You cannot copy contents of this page